ADVERTISEMENT

ಹೊಸಕೋಟೆ: ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:55 IST
Last Updated 17 ಫೆಬ್ರುವರಿ 2012, 19:55 IST

ಹೊಸಕೋಟೆ: ಇಲ್ಲಿಯ ಚನ್ನಬೆೃರೇಗೌಡ ಕ್ರೀಡಾಂಗಣದಲ್ಲಿ ಫೆ.19 ಭಾನುವಾರ ಉಚಿತ `ಆರೋಗ್ಯ ತಪಾಸಣಾ ಶಿಬಿರ~ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 3 ರ ವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರಿಂದ ಹೃದಯ, ಚರ್ಮ, ದಂತ, ಕಣ್ಣು, ಸ್ತ್ರೀ ರೋಗ, ಮೂಳೆಗೆ ಸಂಬಂಧಿಸಿದ ಕಾಯಿಲೆ ಸೇರಿದಂತೆ ಇತರೆ ಕಾಯಿಲೆಗಳ ಪರೀಕ್ಷೆ ಮಾಡಲಾಗುವುದಲ್ಲದೆ ಉಚಿತವಾಗಿ ಔಷಧಿ ಸಹ ನೀಡಲಾಗುವುದು.

ಕಾರ್ಮಿಕ ರಾಜ್ಯ ವಿಮಾ ನಿಗಮದ ವಜ್ರ ಮಹೋತ್ಸವದ ಅಂಗವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.