ಬೆಂಗಳೂರು: ‘ಮಾರ್ಕ್ ಬಿ ಸ್ಕೂಲ್ಸ್ ಹಾಗೂ ಡೆಕ್ಸಲರ್ ಇನ್‌ಫಾರ್ಮೇಶನ್ ಸಲ್ಯೂಷನ್ಸ್ ಸಹಯೋಗದಲ್ಲಿ ಎಸ್‌ಎಪಿ ಬ್ಯುಸಿನೆಸ್ ಒನ್ ಕೋರ್ಸ್ ಆರಂಭಿಸಲಾಗಿದೆ’ ಎಂದು ಮಾರ್ಕ್ ಸ್ಕೂಲ್ ಆಫ್ ಬ್ಯುಸಿನೆಸ್ ಅಧ್ಯಕ್ಷೆ ಸತ್ಯದರ್ಶಿನಿ ಶರ್ಮ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಆನ್‌ಲೈನ್ ಕೋರ್ಸ್ ಆಗಿದೆ. ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಎಸ್‌ಎಪಿ ಕೋರ್ಸ್ ಮೂಲಕ ತಮ್ಮ ವೃತ್ತಿ ಬದುಕು ಕಟ್ಟಿಕೊಳ್ಳಬಹುದು’ ಎಂದರು.
‘ಎಸ್‌ಎಪಿ ಬ್ಯುಸಿನೆಸ್ ಒನ್ ಕೋರ್ಸ್ ಎಲ್ಲಾ ರೀತಿಯ ವ್ಯವಹಾರ ನಿರ್ವಹಣೆ, ಆಡಳಿತದಲ್ಲಿ ಪಾರದರ್ಶಕತೆ, ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿನ ಸ್ಪಷ್ಟತೆಯನ್ನು ಕಲಿಯಬಹುದು. ಕಂಪೆನಿಯ ಹಣಕಾಸು, ಮಾರಾಟ, ಗ್ರಾಹಕರ ನಿರ್ವಹಣೆ, ನಿಯಂತ್ರಣ ಎಲ್ಲ ವಿಷಯಗಳ ಮಾಹಿತಿಯನ್ನು ಒಳಗೊಂಡಿದೆ’ ಎಂದು ಹೇಳಿದರು.
‘ವೃತ್ತಿ ಬದುಕಿನಂತೆ, ನೈಜ ವಾತಾವರಣದಲ್ಲಿ ಕಲಿತ ಅನುಭವ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಉದ್ದಿಮೆಯು ಬಯಸುತ್ತಿರುವ ಪರಿಣಿತರನ್ನು ಸಿದ್ಧಪಡಿಸುವ ಕೋರ್ಸ್ ಆಗಿದೆ’ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಡೆಕ್ಸಲರ್ ಇನ್‌ಫಾರ್ಮೇಷನ್ ಸಲ್ಯೂಷನ್ಸ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಆಂಟನಿ ಆರ್.ಅಂಟಿಕ್, ಸಹಾಯಕ ನಿರ್ದೇಶಕ ಸತ್ಯೇನ್ ಸಾವಂತ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.