ADVERTISEMENT

‘ಕುವೆಂಪು ಎಲ್ಲ ಕಾಲಕ್ಕೂ ಸಲ್ಲುವ ಕವಿ’

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 20:11 IST
Last Updated 5 ಜನವರಿ 2014, 20:11 IST
ಕರ್ನಾಟಕ ವಿಶ್ವಮಾನವ ಸಂಸ್ಥೆಯು ನಗರದಲ್ಲಿ  ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಇಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರೊ.ಎಂ.ಆರ್‌. ದೊರೆ­ಸ್ವಾಮಿ, ಶಿವರಾತ್ರಿ ದೇಶಿಕೇಂದ್ರ ಮಠದ ಮಹದೇವ ಸ್ವಾಮೀಜಿ, ಬೆಂಗಳೂರು ವಿಶ್ವ­ವಿದ್ಯಾ­­ಲ­ಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ, ನಿವೃತ್ತ ಪೊಲೀಸ್‌ ಅಧಿಕಾರಿ ಕೆ.ವಿ. ಆರ್‌.ಟ್ಯಾಗೋರ್‌ ಹಾಜರಿದ್ದರು	–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಅಲ್ಪತನದಿಂದ ವಿಶ್ವ­ಮಾನವ ತತ್ವದೆಡೆಗೆ ಸಾಗುವ ಮೂಲಕ ಕುವೆಂಪು ಅವರಿಗೆ ನಿಜ ಅರ್ಥದಲ್ಲಿ ಗೌರವ ಸಲ್ಲಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ವಿ. ರಾಜಶೇಖರನ್ ತಿಳಿಸಿದರು.

ಕರ್ನಾಟಕ ವಿಶ್ವಮಾನವ ಸಂಸ್ಥೆಯು ನಗರದಲ್ಲಿ  ಭಾನುವಾರ ಆಯೋಜಿ­ಸಿದ್ದ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಸಾಹಿತ್ಯದ ಮೂಲಕವೇ ಮನು­ಕುಲಕ್ಕೆ ಹೊಸದಿಕ್ಕು ತೋರಿಸಿದ ಕುವೆಂಪು ಎಲ್ಲ ಕಾಲಕ್ಕೂ ಸಲ್ಲುವ ಬಹು­ದೊಡ್ಡ ಕವಿ’ ಎಂದು ಬಣ್ಣಿಸಿದರು.
‘ಶೈಕ್ಷಣಿಕ ವಲಯದಲ್ಲಿ ಹೆಚ್ಚಿನ ಸೇವೆ ಸಲ್ಲಿಸುತ್ತಿರುವ ದೊರೆಸ್ವಾಮಿ ಅವರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಸಮರ್ಪಕವಾಗಿದೆ’ ಎಂದು ಶ್ಲಾಘಿಸಿದರು.

ಬೆಂಗಳೂರು ವಿ.ವಿ ವಿಶ್ರಾಂತ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ, ‘ಕಳಪೆ ಗುಣಮಟ್ಟದ ಶಿಕ್ಷಣ
ನೀಡು­ವುದು ಕೂಡ ದೊಡ್ಡ ಅಪರಾಧ’ ಎಂದರು.

ಇದೇ ಸಂದರ್ಭದಲ್ಲಿ ಪಿಇಎಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರಿಗೆ ‘ವಿಶ್ವ ಮಾನವ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.