ADVERTISEMENT

‘ಜೀವನ ಪ್ರೀತಿಯನ್ನು ಕಂಡುಕೊಂಡ ತೇಜಸ್ವಿ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:31 IST
Last Updated 10 ಸೆಪ್ಟೆಂಬರ್ 2013, 19:31 IST
ಅನಿಕೇತನ ಕನ್ನಡ ಬಳಗವು  ಕೃಷ್ಣರಾಜ ಪರಿಷ್ಮನಂದಿರದಲ್ಲಿ  ಮಂಗಳವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ‘ಪೂರ್ಣಚಂದ್ರ ತೇಜಸ್ವಿ’ ಪ್ರಶಸ್ತಿಯನ್ನು ಸಚಿವ ದಿನೇಶ್‌ ಗುಂಡೂರಾವ್‌ ಪ್ರದಾನ ಮಾಡಿದರು. ಕಲಾದೇವಿ ಕೃಷ್ಣಮೂರ್ತಿ, ಸಾಹಿತಿ ಬೈರಮಂಗಲ ರಾಮೇಗೌಡ, ಬಳಗದ ಅಧ್ಯಕ್ಷ ಸಿ.ಮಾಯಣ್ಣ, ವಿಧಾನಪರಿಷತ್‌ ಸದಸ್ಯ ಅಶ್ವತ್ಥ  ನಾರಾಯಣ ಇತರರು ಇದ್ದಾರೆ	–ಪ್ರಜಾವಾಣಿ ಚಿತ್ರ
ಅನಿಕೇತನ ಕನ್ನಡ ಬಳಗವು ಕೃಷ್ಣರಾಜ ಪರಿಷ್ಮನಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ‘ಪೂರ್ಣಚಂದ್ರ ತೇಜಸ್ವಿ’ ಪ್ರಶಸ್ತಿಯನ್ನು ಸಚಿವ ದಿನೇಶ್‌ ಗುಂಡೂರಾವ್‌ ಪ್ರದಾನ ಮಾಡಿದರು. ಕಲಾದೇವಿ ಕೃಷ್ಣಮೂರ್ತಿ, ಸಾಹಿತಿ ಬೈರಮಂಗಲ ರಾಮೇಗೌಡ, ಬಳಗದ ಅಧ್ಯಕ್ಷ ಸಿ.ಮಾಯಣ್ಣ, ವಿಧಾನಪರಿಷತ್‌ ಸದಸ್ಯ ಅಶ್ವತ್ಥ ನಾರಾಯಣ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವೈಚಾರಿಕ ಮನೋಭಾವ ಹಾಗೂ ಸೃಜನಶೀಲತೆಯೊಂದಿಗೆ ಜೀವನ ಪ್ರೀತಿಯನ್ನು ಪ್ರತಿ ಹಂತದಲ್ಲೂ ವ್ಯಕ್ತಪಡಿಸಿದ್ದ ಮಹಾನ್‌ ಚೇತನ ತೇಜಸ್ವಿ. ನನ್ನಂತಹ ಹಲವರಿಗೆ ಗುರುವಾಗಿದ್ದವರು’ ಎಂದು ಅಗ್ರಹಾರ ಕೃಷ್ಣಮೂರ್ತಿ ನೆನಪಿಸಿಕೊಂಡರು.

ಅನಿಕೇತನ ಕನ್ನಡ ಬಳಗವು  ಕೃಷ್ಣ­ರಾಜ ಪರಿಷ್ಮನಂದಿರದಲ್ಲಿ  ಮಂಗಳ­ವಾರ ಆಯೋಜಿಸಿದ್ದ  ಕಾರ್ಯಕ್ರಮ­ದಲ್ಲಿ  ‘ಪೂರ್ಣಚಂದ್ರ ತೇಜಸ್ವಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಈ ಪ್ರಶಸ್ತಿಯನ್ನು ಪಡೆಯಲು ನಿಜಕ್ಕೂ ನಾನು ಅರ್ಹನಲ್ಲ. ಆದರೆ, ಎಲ್ಲರ ಅಭಿಮಾನ ಹಾಗೂ ಅಂತಃ­ಕರಣವೂ ಪ್ರಶಸ್ತಿಯನ್ನು ಸ್ವೀಕರಿಸುವಂತೆ ಮಾಡಿದೆ’ ಎಂದು ತಿಳಿಸಿದರು.

’ಒಬ್ಬ  ಮಹಾನ್‌ ಸಾಹಿತಿಯ ಮಗನಾಗಿ, ತಂದೆಯ ಹೆಸರೆಂಬ  ಅಯಸ್ಕಾಂತದ ಪರಿಧಿಯಿಂದ ಹೊರ ಬಂದು ಒಂದು ಶಕ್ತಿಯಾಗಿ ಹೊಮ್ಮಿದ್ದೇ ಇತಿಹಾಸ’ ಎಂದು ಶ್ಲಾಘಿಸಿದರು.

ಸಚಿವ ದಿನೇಶ್‌ ಗುಂಡೂರಾವ್‌, ‘ದೇಶ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎನಿಸಿದರೂ ಅದರ ಒಳ ಹೊರಗೆ ಹಲವು ಲೋಪ ದೋಷಗಳಿವೆ. ಅದನ್ನು ಜಗತ್ತಿಗೆ ಸಾರಲು ಪ್ರಗತಿಪರ ಸಾಹಿತಿಗಳ ಅಗತ್ಯವಿದೆ’ ಎಂದುಅಭಿಪ್ರಾಯಪಟ್ಟರು.

‘ಸಮಾಜವನ್ನು ತಿದ್ದುವ ಕಾರ್ಯ­ದಲ್ಲಿ ಸಾಹಿತಿಗಳ ಪಾತ್ರ ದೊಡ್ಡದು. ಯಾವುದೇ ಸಿದ್ಧಾಂತವಿದ್ದರೂ ವಿಮರ್ಶಾ ದೃಷ್ಟಿಯಿಂದ ಪ್ರತಿ ವಿಚಾರ­ಗಳು ಮುಖ್ಯವೆನಿಸುತ್ತದೆ’ ಎಂದರು.

‘ಭ್ರಷ್ಟಾಚಾರ ಮತ್ತು ಜಾತೀಯತೆ­ಯನ್ನು ವಿರೋಧಿಸಿ ಪುಖಾನುಪುಂಖ­ವಾಗಿ ಭಾಷಣ ಮಾಡಬಹುದು. ವ್ಯವಸ್ಥೆ ತಿಳಿಯಾಗಿಲ್ಲ. ಸ್ವಲ್ಪ ಮಟ್ಟಿಗೆ ರಾಜಿ­ಯಾಗದೇ ಏನನ್ನು ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

’ಬಹಳ ಸರಳವಾಗಿ ನಡೆದು­ಕೊಂಡರೆ ಠೇವಣಿಯನ್ನೇ ಕಳೆದುಕೊಳ್ಳ­ಬೇಕಾಗು­ತ್ತದೆ. ಸ್ವಲ್ಪ ಮಟ್ಟಿಗೆ ರಾಜಿ­ಯಾ­ಗಿಯೇ ಇದ್ದುದರಲ್ಲಿ ತುಸು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸ­ಬೇಕು. ಹೊರಗೆ ನಿಂತು ಚಿಂತಕ, ವಿಮರ್ಶ­ಕನಾಗಿ ಟೀಕೆ ಮಾಡುವುದು ಸುಲಭ’ ಎಂದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್‌, ‘ ಕುವೆಂಪು ಅವರಿಗೆ ಸರಿಸಮಾನದ ಪ್ರತಿಭೆ ತೇಜಸ್ವಿ, ಮಹಾಯುದ್ದ, ಪರಿಸರ ಎಲ್ಲ­ದರ ಕುರಿತು ವಿಸ್ತೃತವಾಗಿ ಬರೆಯುವ ಚಾಕಚಕ್ಯತೆಯ ಅವರಿಗೆ ಮಾತ್ರ ಇತ್ತು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.