ಪೀಣ್ಯ ದಾಸರಹಳ್ಳಿ : ಪ್ರಾಚೀನ ಕವಿತೆಗಳನ್ನು ಓದಿ ಅರಗಿಸಿಕೊಂಡಾಗ ಮಾತ್ರ ಪ್ರಬುದ್ಧ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ ಎಂದು ಶೈಕ್ಷಣಿಕ ಸಲಹೆಗಾರ ನಾ.ಕಾಳೇಶ್ವರರಾವ್ ಅಭಿಪ್ರಾಯಪಟ್ಟರು.
ದಾಸರಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕವಿಗೋಷ್ಠಿ ಭಾಗವಹಿಸಿ ಮಾತನಾಡಿದರು. ಕಾವ್ಯವನ್ನು ನಿರಂತರವಾಗಿ ಓದುವುದರಿಂದ ಶ್ರೇಷ್ಠ ಕವಿತೆಗಳನ್ನು ರಚಿಸಲು ಸಾಧ್ಯ ಎಂದರು. ಕವಿ ಜರಗನಹಳ್ಳಿ ಶಿವಶಂಕರ್, ಸಾಹಿತ್ಯ ಹೊನಲಿನಲ್ಲಿ ಕವಿತೆಗಳು ರೂಪುಗೊಳ್ಳಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.