ADVERTISEMENT

‘ಮನಸ್ಸಿನ ಕಲ್ಪನೆಯ ಪ್ರತೀಕ ರಂಗೋಲಿ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:21 IST
Last Updated 2 ಡಿಸೆಂಬರ್ 2013, 19:21 IST

ಕೃಷ್ಣರಾಜಪುರ:  ‘ರಂಗೋಲಿಗಳು ಮನಸ್ಸಿನ ಕಲ್ಪನೆಗಳನ್ನು ಪ್ರತಿಬಿಂಬಿ ಸುತ್ತವೆ. ಮಹಿಳೆಯರು ಅಧಿಕ ಸಂಖ್ಯೆ ಯಲ್ಲಿ ರಂಗೋಲಿ ಸ್ಪರ್ಧೆಗಳಲ್ಲಿ ತೊಡಗಿ­ಸಿಕೊಳ್ಳಬೇಕು’ ಎಂದು ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಸಲಹೆ ನೀಡಿದರು.

ಅಮರಜ್ಯೋತಿ ಶಾಲೆಯ ಆವರ ಣದಲ್ಲಿ ಭಾನುವಾರ ಏರ್ಪ ಡಿಸಿದ್ದ ‘ರಂಗೋಲಿ ಸ್ಪರ್ಧೆ’ಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಎಸ್.ಇ.ಎ. ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಆರ್.ನಾಗೇಂದ್ರ, ಕುಮಾರ್ ಮತ್ತಿತರು ಉಪಸ್ಥಿತರಿದ್ದರು.

ಸೌಮ್ಯ ಕೃಷ್ಣಮೂರ್ತಿ ಪ್ರಥಮ ಬಹುಮಾನ (₨5,000) ಗಳಿಸಿದರು. ಭವ್ಯ ಚಂದ್ರಶೇಖರ್ ಎರಡನೇ, ಸರೋಜ ಮೂರನೇ, ಶೈಲಜಾ ನಾಲ್ಕನೇ, ವಸುಂಧರಾ ಐದನೇ ಬಹು ಮಾನ ಗಳಿಸಿದರು. 10 ಮಂದಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.