
ಪ್ರಜಾವಾಣಿ ವಾರ್ತೆಬೆಂಗಳೂರು: ನಗರದಲ್ಲಿರುವ ಇಂಗ್ಲೆಂಡ್ ಉಪ ರಾಯಭಾರಿ ಕಚೇರಿಯಿಂದ ಮಂಗಳವಾರ ‘ಮಹಾರಾಣಿ ಜನ್ಮದಿನದ ಕೂಟ’ (ಇಂಗ್ಲೆಂಡ್ ರಾಷ್ಟ್ರೀಯ ದಿನ)ವನ್ನು ಏರ್ಪಡಿಸಲಾಗಿತ್ತು. ಕಳೆದ ವರ್ಷ ಭಾರತ ಹಾಗೂ ಇಂಗ್ಲೆಂಡ್ ಸಂಬಂಧದಲ್ಲಿ ಆಗಿರುವ ಸುಧಾರಣೆಗಳ ಕುರಿತು ಆ ದೇಶದ ಉಪ ರಾಯಭಾರಿ ಇಯಾನ್ ಫೆಲ್ಟನ್ ವಿವರಣೆ ನೀಡಿದರು.
‘ಕೇವಲ ಮೂರು ತಿಂಗಳ ಅವಧಿಯಲ್ಲಿ ಇಬ್ಬರು ಸಂಪುಟ ದರ್ಜೆ ಸಚಿವರು ಬೆಂಗಳೂರಿಗೆ ಭೇಟಿ ನೀಡಿದರು. ಹೌಸ್ ಆಫ್ ಕಾಮನ್ ಮತ್ತು ಹೌಸ್ ಆಫ್ ಲಾರ್ಡ್ಸ್ ಎರಡೂ ಸದನದ ಎಂಟು ಜನ ಬ್ರಿಟಿಷ್ ಸಂಸದರ ತಂಡ ಕಳೆದ ತಿಂಗಳು ಈ ನಗರಕ್ಕೆ ಪ್ರವಾಸ ಕೈಗೊಂಡಿತ್ತು’ ಎಂದು ಅವರು ಮೆಲುಕು ಹಾಕಿದರು.
ರಾಜಕೀಯ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಈ ಕೂಟದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.