ADVERTISEMENT

‘ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತು ಅಗತ್ಯ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:52 IST
Last Updated 5 ಮಾರ್ಚ್ 2014, 19:52 IST

ಯಲಹಂಕ: ‘ಭಾರತದಲ್ಲಿ ಜಗತ್ತಿನಲ್ಲೇ ಉತ್ಕೃಷ್ಟವಾದ ವೈಜ್ಞಾನಿಕ ಸಂಪ­ನ್ಮೂಲವಿದೆ. ಮಂಗಳಯಾನ ಯಶಸ್ಸಿಗೆ ಅಪಾರವಾದ ಕೊಡುಗೆ ನೀಡಿರುವುದೇ ಇದಕ್ಕೆ ಸಾಕ್ಷಿ’ ಎಂದು ಬಾಹ್ಯಾಕಾಶ ವಿಜ್ಞಾನಿ ಪ್ರೊ.  ಯು.ಆರ್‌.ರಾವ್‌ ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಕಟ್ಟಿಗೇನಹಳ್ಳಿಯ ರೇವಾ ವಿಜ್ಞಾನ ಮತ್ತು ನಿರ್ವಹಣಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ವೈಜ್ಞಾನಿಕ  ಮನೋಭಾವದ ಬೆಳವಣಿಗೆಗೆ ಪ್ರೋತ್ಸಾಹ’ ಕುರಿತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

‘ವಿಜ್ಞಾನದ ಬೆಳವಣಿಗೆಯಂತೆ ದೇಶದಲ್ಲಿ ಇತರೆ ಕ್ಷೇತ್ರಗಳ ಬೆಳವಣಿಗೆ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಯಾಗಬೇಕು. ಮೂಢನಂಬಿಕೆಗಳನ್ನು ಹೋಗ ಲಾಡಿಸಬೇಕು. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತಿಮುಖ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.