ADVERTISEMENT

‘ಯುವಪೀಳಿಗೆ ಹೊರೆ ಶಿಕ್ಷಕರದು’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:43 IST
Last Updated 3 ಜನವರಿ 2014, 19:43 IST
ಸಹಕಾರನಗರದ ಕಾವೇರಿ ಬಿ.ಇಡಿ.ಕಾಲೇಜಿನಲ್ಲಿ ಈಚೆಗೆ ನಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ವಿಭಾಗದಲ್ಲಿ ವೈಯಕ್ತಿಕ ಸಮಗ್ರ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಲಕ್ಷ್ಮಿ ಆರ್‌.ಎಚ್‌ ಅವರಿಗೆ ಬಸವ ಬಳಗದ ಅಧ್ಯಕ್ಷ ಡಾ.ಕೆ.ಪಿ.ಗುರುಸ್ವಾಮಿ ಅವರು ಬಹುಮಾನ ವಿತರಿಸಿದರು. ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಂ.ದೇವರಾಜಪ್ಪ ಇತರರು ಚಿತ್ರದಲ್ಲಿದ್ದಾರೆ

ಯಲಹಂಕ:‘ಕೇವಲ ಸಂಬಳ ಗಳಿಸುವ ಉದ್ದೇಶದಿಂದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳದೆ, ದೇಶದ ಭವಿಷ್ಯದ ಉತ್ತಮ ಪೀಳಿಗೆಯನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಬೇಕು’ ಎಂದು ಬಸವ ಬಳಗದ ಅಧ್ಯಕ್ಷ ಡಾ.ಕೆ.ಪಿ.ಗುರುಸ್ವಾಮಿ ಹೇಳಿದರು.

ಸಹಕಾರನಗರದ ಕಾವೇರಿ ಬಿ.ಎಡ್‌.ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾ­ರಂಭ­ದಲ್ಲಿ ಮಾತನಾಡಿದ ಅವರು, ಜನರು ಇಷ್ಟ­ಪ­ಡುವ ಮತ್ತು ಅನುಕರಣೆ ಮಾಡುವ ರೀತಿ ವ್ಯಕ್ತಿತ್ವ­­ವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸ­ಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಶ್‌ ಇ.ಬಿ,  ಉಪನ್ಯಾಸಕರಾದ ಎಸ್‌.ಆರ್‌. ಬಿಂದು­ಕುಮಾರ್‌, ಸಿ.ಎಸ್‌.ಗುಂಡಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.