ADVERTISEMENT

‘ಸಾಮಾಜಕ್ಕೆ ಯುವಜನರ ಕೊಡುಗೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 20:10 IST
Last Updated 8 ಮಾರ್ಚ್ 2014, 20:10 IST

ಯಲಹಂಕ: ‘ವ್ಯಾಪಾರ ಹಾಗೂ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯುವಜನಾಂಗದ ಕೊರತೆಯಿದ್ದು, ಇದನ್ನು ನೀಗಿಸಲು ನಿರ್ವಹಣಾ ಶಿಕ್ಷಣ ಸಂಸ್ಥೆ­ಗಳು ಸೇತುವೆಯ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಹೆಬ್ಬಾಳ ಕೆಂಪಾಪುರದ ಸಿಂಧಿ ಕಾಲೆೇಜಿನ 20ನೇ ವರ್ಷದ ಸಂಭ್ರಮಾ ಚರಣೆ ಮತ್ತು ನೂತನ ನಿರ್ವಹಣಾ ಶಿಕ್ಷಣ ಘಟಕ ಹಾಗೂ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಶಿಕ್ಷಣದಲ್ಲಿ ನೀಡುತ್ತಿರುವ ಸಾಮಾನ್ಯ ಪದವಿಗಳ ಜೊತೆಗೆ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ನಿರ್ವಹಣಾ ಶಿಕ್ಷಣ ವಿಭಾಗಗಳು ಸಹಕಾರಿ ಯಾಗಲಿವೆ’ ಎಂದು ಅವರು ಹೇಳಿದರು.
ಅಂತರಕಾಲೇಜು ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ­ಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಅಂತರರಾಷ್ಟ್ರೀಯ ಟೇಕ್ವಾಂಡೊ ಕ್ರೀಡೆಯ ತರಬೇತುದಾರ ಜೈ ಕುಮಾರ್‌ ಕಣ್ಣನ್‌, ಶೋಷಣೆ ವಿರೋಧಿ ಕಾರ್ಯಪಡೆಯ ಮಹಾನಿರ್ದೇಶಕ  ಅನುಪಮ್‌ ದೇವ್‌, ಗಾಯಕಿ ವಾಣಿ ಹರಿಕೃಷ್ಣ, ಪ್ರಾಂಶುಪಾಲ ಡಾ.ಪ್ರಕಾಶ್‌ ನಾಯಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.