ADVERTISEMENT

₹20 ಕೋಟಿ ಸಾಲದ ಆಮಿಷ: ವಂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 18:28 IST
Last Updated 5 ನವೆಂಬರ್ 2020, 18:28 IST

ಬೆಂಗಳೂರು: ಕೆಎಸ್‌ಎಫ್‌ಸಿ ಬ್ಯಾಂಕ್‌ನಲ್ಲಿ ₹20 ಕೋಟಿ ಸಾಲ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸ
ಲಾಗಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ‘ಬ್ಲೂ ಕ್ಲಿಪ್ ಅಪಾರೆಲ್ಸ್ ಇಂಡಿಯಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಜಿತ್‌ಕುಮಾರ್ ದೂರು ನೀಡಿದ್ದಾರೆ. ಕೆಎಸ್‌ಎಫ್‌ಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೆಂಕಟೇಶಪ್ಪ, ಜಾನ್‌ ಬಾಬು, ಮನು, ಬಾಲಾಜಿ ಚೆಟ್ಟಿಯಾರ್, ತ್ಯಾಗರಾಜ್ ಹಾಗೂ ದಿನೇಶ್‌ ಜಾಧವ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಕಂಪನಿ ಅಭಿವೃದ್ಧಿ ಮಾಡುತ್ತಿದ್ದ ದೂರುದಾರ ಶ್ರೀಜಿತ್‌ಕುಮಾರ್, ₹20 ಲಕ್ಷ ಸಾಲ ನೀಡುವಂತೆ ಕೋರಿ 2019ರ ಜೂನ್‌ನಲ್ಲಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ದೂರು

ADVERTISEMENT

ದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ್ದ ಆರೋಪಿಗಳು, ಸಾಲ ಕೊಡಿಸಲು ಕಮಿಷನ್ ನೀಡಬೇಕೆಂದು ಹೇಳಿದ್ದರು.’

‘ಆರೋಪಿಗಳ ಮಾತು ನಂಬಿದ್ದ ದೂರುದಾರ, ಚೆಕ್‌ ಪುಸ್ತಕ ಹಾಗೂ ನಗದು ಮೂಲಕ ಒಟ್ಟು ₹ 43 ಲಕ್ಷ ನೀಡಿದ್ದರು. ಅದಾದ ನಂತರ ಆರೋಪಿಗಳು ಸಾಲ ಕೊಡಿಸಿರಲಿಲ್ಲ. ಈ ಬಗ್ಗೆ ಕೇಳಿದಾಗ, ₹10 ಲಕ್ಷ ಮಾತ್ರ ವಾಪಸು ನೀಡಿದ್ದಾರೆ. ಉಳಿದ ₹ 33 ಲಕ್ಷ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.