ADVERTISEMENT

10 ಸಾವಿರ ಸಸಿ ನೆಡುವ ಗುರಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST
10 ಸಾವಿರ ಸಸಿ ನೆಡುವ ಗುರಿ
10 ಸಾವಿರ ಸಸಿ ನೆಡುವ ಗುರಿ   

ಯಲಹಂಕ: ಯಲಹಂಕ ವಲಯ ವ್ಯಾಪ್ತಿಯಲ್ಲಿ ಹತ್ತು ಸಾವಿರ ಸಸಿಗಳನ್ನು ನೆಡುವ ಗುರಿ ಇದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಪುಟ್ಟೇನಹಳ್ಳಿಯ ಕೆಎಚ್‌ಬಿ ಕಾಲೋನಿ ಉದ್ಯಾನದಲ್ಲಿ ಬಿಬಿಎಂಪಿ ಸದಸ್ಯರ ಹಾಗೂ ಅಧಿಕಾರಿಗಳ ಶ್ರಮದಾನದ ಮೂಲಕ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಈ ಭಾಗದಲ್ಲಿ ಸಾಂಕೇತಿಕವಾಗಿ ವಿವಿಧ ಜಾತಿಯ 2 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ~ ಎಂದರು.

`ಯಲಹಂಕದ 56 ಉದ್ಯಾನಗಳ ಪೈಕಿ 52ರಲ್ಲಿ ಈಗಾಗಲೇ ಹೊಂಗೆ, ಬೇವು, ಹಲಸು ಸೇರಿದಂತೆ ಔಷಧಿಯುಕ್ತ ಸಸಿಗಳನ್ನು ಬೆಳೆಸಲಾಗಿದೆ. ಮುಂದಿನ 5 ವರ್ಷಗಳಲ್ಲಿ  60 ಕಿರು ಅರಣ್ಯಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ~ ಎಂದರು.
 
ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ರಬೀಂದ್ರ, ಪಾಲಿಕೆ ಸದಸ್ಯೆ ಕೆ.ವಿ.ಯಶೋಧಾ ರವಿಶಂಕರ್, ವಲಯ ಅರಣ್ಯಾಧಿಕಾರಿ ಆರ್. ಸುರೇಶ್, ತೋಟಗಾರಿಕೆ ಇಲಾಖೆ ಅಧೀಕ್ಷಕ ಮಹಮದ್ ಆಲಿ, ಕಾರ್ಯನಿರ್ವಾಹಕ ಎಂಜಿನಿಯರ್ ಎ.ಜಿ.ರಂಗಯ್ಯ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.