ADVERTISEMENT

ನೆಟ್ ಆ್ಯಪ್‌ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ 10,000 ಹ್ಯಾಪಿನೆಸ್ ಕಿಟ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 12:17 IST
Last Updated 7 ಏಪ್ರಿಲ್ 2021, 12:17 IST
ಅಕ್ಷಯಪಾತ್ರಾ ಫೌಂಡೇಷನ್ ನೀಡುತ್ತಿರುವ ಹ್ಯಾಪಿನೆಸ್ ಕಿಟ್‍
ಅಕ್ಷಯಪಾತ್ರಾ ಫೌಂಡೇಷನ್ ನೀಡುತ್ತಿರುವ ಹ್ಯಾಪಿನೆಸ್ ಕಿಟ್‍   

ಬೆಂಗಳೂರು: ಜಾಗತಿಕ ಕ್ಲೌಡ್ ನೇತೃತ್ವದ ದತ್ತಾಂಶ ಕೇಂದ್ರೀಕೃತ ಸಾಫ್ಟ್‌ವೇರ್ ಕಂಪನಿ ನೆಟ್‍ಆ್ಯಪ್ ಈಗ ಅಕ್ಷಯಪಾತ್ರಾ ಫೌಂಡೇಷನ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿನ ಸೌಲಭ್ಯವಂಚಿತ ದುರ್ಬಲ ವರ್ಗದ ಸರ್ಕಾರಿ ಶಾಲಾ ಮಕ್ಕಳು ಮತ್ತು ಅವರ ಕುಟುಂಬಗಳಿಗೆ 10,000 ಹ್ಯಾಪಿನೆಸ್ ಕಿಟ್‍ಗಳ ವಿತರಣೆ ಕೈಗೊಳ್ಳಲು ಮುಂದಾಗಿದೆ.

ನೆಟ್‍ಆ್ಯಪ್ ಮತ್ತು ಅಕ್ಷಯಪಾತ್ರಾ ನಡುವಿನ ಪಾಲುದಾರಿಕೆ 7 ವರ್ಷಗಳಿಂದ ನಡೆಯುತ್ತಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಶಾಲೆಗಳು ಮುಚ್ಚುವ ಮುನ್ನ ಬೆಂಗಳೂರಿನಲ್ಲಿನ ಸರ್ಕಾರಿ ಶಾಲೆಗಳ 5,000 ಮಕ್ಕಳಿಗೆ ನೆಟ್‍ಆ್ಯಪ್ ಮಧ್ಯಾಹ್ನದ ಭೋಜನದ ಪ್ರಾಯೋಜಕತ್ವ ವಹಿಸಿತ್ತು.

ನೆಟ್‍ಆ್ಯಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರವಿ ಚಾಬ್ರಿಯಾ ಮಾತನಾಡಿ, 'ಅಕ್ಷಯಪಾತ್ರಾದಿಂದ ನೀಡುತ್ತಿರುವ ಮಧ್ಯಾಹ್ನದ ಭೋಜನದಿಂದಾಗಿ ಶಾಲೆಗಳಲ್ಲಿ ಹಾಜರಿ ಉತ್ತಮಗೊಂಡಿದ್ದು, ಶಾಲೆ ಬಿಡುವ ಮಕ್ಕಳ ದರ ಕೂಡ ಕಡಿಮೆಯಾಗಿದೆ. ಕಳೆದ ಏಳು ವರ್ಷಗಳಲ್ಲಿ ಅಕ್ಷಯಪಾತ್ರಾ ಫೌಂಡೇಷನ್ ಜೊತೆಗೆ ನಾವು ಹಲವಾರು ಸಹಯೋಗಗಳನ್ನು ಕೈಗೊಂಡಿದ್ದೇವೆ. ಎಳೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡುವ ಪ್ರಯಾಣವನ್ನು ಮುಂದುವರೆಸಲು ಇಚ್ಛಿಸುತ್ತೇವೆ' ಎಂದರು.

ADVERTISEMENT

ಅಕ್ಷಯಪಾತ್ರಾ ಫೌಂಡೇಷನ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ವೆಂಕಟ್ ಮಾತನಾಡಿ, 'ನಮ್ಮಲ್ಲಿ ನೆಟ್‍ಆ್ಯಪ್ ತೋರಿರುವ ನಂಬಿಕೆಗೆ ನಾವು ಕೃತಜ್ಞರಾಗಿದ್ದೇವೆ. ನಮ್ಮ ಕೋವಿಡ್ ಆಹಾರ ಪರಿಹಾರ ಪ್ರಯತ್ನಗಳ ಭಾಗವಾಗಿ 12 ಕೋಟಿಗೂ ಹೆಚ್ಚಿನ ಭೋಜನ ಸೇವೆಯನ್ನು ನಾವು ಕೈಗೊಂಡಿದ್ದೇವೆ. ಕಾರ್ಪೋರೇಟ್ ಸಂಸ್ಥೆಗಳು, ಸರ್ಕಾರ ಮತ್ತು ಸಾರ್ವಜನಿಕರಿಂದ ಸಿಕ್ಕ ಬೆಂಬಲದಿಂದ ಉದು ಸಾಧ್ಯವಾಗಿದೆ. ದೇಶದಲ್ಲಿರುವ ಅಪಾರ ಆಹಾರ ಅಭದ್ರತೆಯನ್ನು ಮೀರಿ ಸಾಗಲು ಸಾಂಘಿಕ ಪ್ರಯತ್ನ ಮಾತ್ರ ನಮಗೆ ನೆರವಾಗಬಲ್ಲದು' ಎಂದರು.

ಬೆಂಗಳೂರಿನಿಂದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ತೆರಳುವ ಶ್ರಮಿಕ ರೈಲುಗಳಲ್ಲಿನ ಪ್ರಯಾಣಿಕರಿಗೆ 14,738 ಆಹಾರದ ಕಿಟ್‍ಗಳ ವಿತರಣೆಗಾಗಿ ನೆಟ್‍ಆ್ಯಪ್ ಕೊಡುಗೆ ನೀಡಿದೆ. ನವೆಂಬರ್ 2020ರಲ್ಲಿ ನೆಟ್‍ಆ್ಯಪ್ ಹಸಿವಿನ ಮಾಸವನ್ನು ಆಚರಿಸಿತ್ತು. ಈ ಸಂದರ್ಭ ತಮ್ಮ ಉದ್ಯೋಗಿಗಳು ಮತ್ತು ಅಕ್ಷಯಪಾತ್ರಾ ಫೌಂಡೇಷನ್ ನಡುವೆ ಕಂಪನಿ ವೆಬಿನಾರ್ ಆಯೋಜಿಸಿ ಶಾಲೆಗಳು ಮುಚ್ಚುವ ಮುನ್ನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಯಾವ ರೀತಿಯಲ್ಲಿ ಬಿಸಿಯಾದ ಮತ್ತು ಪೋಷಕಾಂಶಯುಕ್ತ ಭೋಜನಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಸ್ವಯಂಸೇವಕರು ಗಮನಿಸಿದರು. 10 ದೇಶಗಳಿಗೂ ಹೆಚ್ಚಿನ 345 ಉದ್ಯೋಗಿ ಸ್ವಯಂಸೇವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.