ADVERTISEMENT

4,146 ವಿದ್ಯಾರ್ಥಿನಿಯರಿಗೆ ₹1.59 ಕೋಟಿ ವಿದ್ಯಾರ್ಥಿ ವೇತನ

ಬಝ್ಮೆ ನಿಸ್ವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆರವು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 20:54 IST
Last Updated 27 ನವೆಂಬರ್ 2022, 20:54 IST
 ಬಝ್ಮೆ ನಿಸ್ವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹುಸ್ನಾ ಶರೀಫ್ ಇದ್ದರು.
 ಬಝ್ಮೆ ನಿಸ್ವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹುಸ್ನಾ ಶರೀಫ್ ಇದ್ದರು.   

ಬೆಂಗಳೂರು: ಬಝ್ಮೆ ನಿಸ್ವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ 4146 ಬಡ ಮತ್ತು ಅಗತ್ಯವುಳ್ಳ ವಿದ್ಯಾರ್ಥಿನಿಯರಿಗೆ ₹1.59 ಕೋಟಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.

1971ರಲ್ಲಿ ಕೆಲವೇ ಮಹಿಳೆಯರು ಸೇರಿಕೊಂಡು ಟ್ರಸ್ಟ್ ಆರಂಭಿಸಿದ್ದರು. ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಅಗತ್ಯವಿರು ವವರಿಗೆ ವೈದ್ಯಕೀಯ ಸಹಾಯ, ವಿವಾಹ ನಿಧಿ, ಪಿಂಚಣಿ ಇತ್ಯಾದಿ
ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಹುಸ್ನಾ ಶರೀಫ್ ಅವರ ನೇತೃತ್ವದಲ್ಲಿ ಟ್ರಸ್ಟ್ ನಡೆಯುತ್ತಿದೆ. 197 1ರಿಂದ 67 ಸಾವಿರ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ADVERTISEMENT

ಈ ಬಾರಿ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯ ಮುಸ್ಲಿಂ ವಿದ್ಯಾರ್ಥಿನಿಯರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಯಿತು. 5200 ಅರ್ಜಿಗಳು ಬಂದಿದ್ದವು. ಇವರಲ್ಲಿ 4146 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.