ಬೆಂಗಳೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜತೆಯಾಗಿ ಮಾ. 22, 24 ಹಾಗೂ 27ರಂದು ನಗರದಲ್ಲಿ ಲೋಕ ಅದಾಲತ್ ಏರ್ಪಡಿಸಿವೆ.
ಕಟ್ಟಡ ಮಂಜೂರಾತಿ ಪರವಾನಗಿ , ರಸ್ತೆ ಅಗೆತ ಅನುಮತಿ, ಖಾತಾ ವರ್ಗಾವಣೆ, ನೋಂದಣಿ, ಉದ್ದಿಮೆ ಪರವಾನಿಗೆ, ನವೀಕರಣ, ಭೂಸ್ವಾಧೀನ ಪರಿಹಾರ, ಟಿಡಿಆರ್ ಅರ್ಜಿ ವಿಲೇವಾರಿ, ಜನನ–ಮರಣ ನೋಂದಣಿ, ಪಿಂಚಣಿ ಮೊದಲಾದ ಬಿಬಿಎಂಪಿ ಸೇವೆ ಕುರಿತಂತೆ ಸಾರ್ವಜನಿಕರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಎನ್.ಕೆ. ಪಾಟೀಲ್ 22ರಂದು ಪುರಭವನದಲ್ಲಿ ಅದಾಲತ್ ಉದ್ಘಾಟಿಸಲಿದ್ದಾರೆ. ಅಂದು ಪೂರ್ವ ಹಾಗೂ ಪಶ್ಚಿಮ ವಲಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು. ದಕ್ಷಿಣ ವಲಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು 24ರಂದು ಮಲ್ಲೇಶ್ವರದ ಐಪಿಪಿ ಕಟ್ಟಡದಲ್ಲಿ ಆಯೋಜಿಸಿರುವ ಸಭೆಯಲ್ಲಿ, ಇದೇ ಸ್ಥಳದಲ್ಲಿ 27ರಂದು ಉಳಿದ ಎಲ್ಲ ವಲಯಗಳ ಪ್ರಕರಣ ಇತ್ಯರ್ಥ ಮಾಡಿಕೊಳ್ಳಬಹುದು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.