
ಪ್ರಜಾವಾಣಿ ವಾರ್ತೆ
ಬೆಂಗಳೂರು: ಬೆಂಗಳೂರು ನಗರ ಎದುರಿಸುತ್ತಿರುವ ವಾಹನ ದಟ್ಟಣೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಉತ್ತಮ ಪರಿಹಾರದ ಆಲೋಚನೆಗಳಿದ್ದರೆ ₹ 25 ಲಕ್ಷ ಬಹುಮಾನ ಗೆಲ್ಲುವ ಅವಕಾಶವಿದೆ. ಅಂತಹ ಸ್ಟಾರ್ಟ್‌ಅಪ್‌ಗಳಿಂದ ವಿಶ್ವ ಆರ್ಥಿಕ ವೇದಿಕೆಯು ‘ಯೆಸ್ ಬೆಂಗಳೂರು ಅರ್ಬನ್ ಇನ್ನೋವೇಶನ್ ಚಾಲೆಂಜ್’ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ಆಲೋಚನೆಗಳನ್ನು ಸ್ಟಾರ್ಟ್‌ಅಪ್‌ಗಳು https://uplink.weforum.org/uplink/s/uplinkissue/a00TE00000IOEHIYA5/yesbengaluru-urban-innovation-challenge?activeTab=Roadblocks ಈ ವೆಬ್‌ಸೈಟ್ ಮೂಲಕ ಹಂಚಿಕೊಳ್ಳಬಹುದು. ನವೆಂಬರ್ 24ರ ಒಳಗೆ ಸಲ್ಲಿಸಬೇಕು. ಆಯ್ಕೆಯಾದ ನಾವಿನ್ಯಕಾರರನ್ನು 2026ರ ಆರಂಭದಲ್ಲಿ ಘೋಷಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.