ADVERTISEMENT

3 ತಿಂಗಳಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 20:07 IST
Last Updated 7 ಜುಲೈ 2022, 20:07 IST
ವಸತಿ ಸಚಿವ ವಿ. ಸೋಮಣ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ತ್ರಿಲೋಕ ಚಂದ್ರ, ವಲಯ ಆಯುಕ್ತ ದೀಪಕ್ ಇದ್ದರು
ವಸತಿ ಸಚಿವ ವಿ. ಸೋಮಣ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ತ್ರಿಲೋಕ ಚಂದ್ರ, ವಲಯ ಆಯುಕ್ತ ದೀಪಕ್ ಇದ್ದರು   

ಬೆಂಗಳೂರು: ಪಂತರಪಾಳ್ಳದಲ್ಲಿ 200 ಹಾಸಿಗೆ ಮತ್ತು ದಾಸರಹಳ್ಳಿಯಲ್ಲಿ 290 ಹಾಸಿಗೆ ಸಾಮ್ಯರ್ಥದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೂರು ತಿಂಗಳಲ್ಲಿ ಲೋಕಾರ್ಪಣೆಯಾಗಲಿವೆ ಎಂದು ಗುರುವಾರ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕನಕ ಭವನ, ಚಂದ್ರಾಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಪೆಕ್ಟ್ರಮ್ ಬೀದಿ ದೀಪಗಳ ಕಂಟ್ರೋಲ್ ರೂಂ, ಎಂ.ಸಿ.ಬಡಾವಣೆ ಆಸ್ಪತ್ರೆ ಹಾಗೂ ಅಗ್ರಹಾರ ದಾಸರಹಳ್ಳಿ ಆಸ್ಪತ್ರೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ‘ಆರ್ಥಿಕವಾಗಿ ಹಿಂದುಳಿದ ಮಕ್ಕಳು ಐಎಎಸ್ ಮತ್ತು ಐಪಿಎಸ್ ಅಧಿಕಾರಿಯಾಗಬೇಕು. ಅವರ ಶಿಕ್ಷಣದ ಆಸೆ ಈಡೇರಿಸಲು ಕನಕದಾಸರ ಸ್ಮರಣೆಯಲ್ಲಿಕನಕ ಭವನ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 15ರಂದು ಇದನ್ನು ಉದ್ಘಾಟಿಸಲಿದ್ದಾರೆ’
ಎಂದರು.

ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ತ್ರಿಲೋಕ ಚಂದ್ರ, ವಲಯ ಆಯುಕ್ತ ದೀಪಕ್, ಮುಖ್ಯ ಎಂಜಿನಿಯರ್‌ ಡೊಡ್ಡಯ್ಯ, ಗೋವಿಂದ
ರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಕುರುಬ ಸಮಾಜದ ಮುಖಂಡ ಟಿ.ವಿ.ಬಳಗಾವಿ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಂ.ಸೋಮಶೇಖರ್, ರಾಮಪ್ಪ, ಶ್ರೀಧರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.