ADVERTISEMENT

ಆನ್‌ಲೈನ್‌ ಹೂಡಿಕೆ: ₹ 5.42 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 21:51 IST
Last Updated 17 ಜೂನ್ 2021, 21:51 IST
   

ಬೆಂಗಳೂರು: ಆನ್‌ಲೈನ್‌ ಜಾಲತಾಣಗಳಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ನಂಬಿಸಿ ನಗರದ ನಿವಾಸಿಗಳಿಬ್ಬರಿಂದ ₹ 5.42 ಲಕ್ಷ ಪಡೆದು ವಂಚಿಸಲಾಗಿದೆ.

‘ವಂಚನೆ ಬಗ್ಗೆ ವೈಟ್‌ಫೀಲ್ಡ್ ಹಾಗೂ ಉತ್ತರ ವಿಭಾಗಗಳ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕುರುಬರಹಳ್ಳಿಯ ನಿವಾಸಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿ, ದುಪ್ಪಟ್ಟು ಲಾಭದ ಆಮಿಷವೊಡ್ಡಿದ್ದರು. ಹೈಪೇಜಾ ಡಾಟ್ ಕಾಮ್‌ ಜಾಲತಾಣದ ಹೆಸರಿನಲ್ಲಿ ₹ 3.38 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ಆರೋಪಿ ಯಾವುದೇ ಲಾಭ ನೀಡಿಲ್ಲ. ಹಣವನ್ನೂ ವಾಪಸು ಕೊಟ್ಟಿಲ್ಲ’ ಎಂದೂ ತಿಳಿಸಿದರು.

ADVERTISEMENT

’ಇನ್ನೊಂದು ಪ್ರಕರಣದಲ್ಲಿ ಕಾಡುಗೋಡಿ ನಿವಾಸಿಯೊಬ್ಬರು, ಸ್ಟೇನ್‌66 ಡಾಟ್ ಕಾಮ್‌ ಜಾಲತಾಣದಲ್ಲಿ ಹಣ ಹೂಡಿಕೆ ಮಾಡಿದ್ದರು. ಷೇರು ವ್ಯವಹಾರ ಮಾಡುವುದಾಗಿ ಹೇಳಿದ್ದ ಕಂಪನಿ, ಆರಂಭದಲ್ಲಿ ಲಾಭ ನೀಡಿತ್ತು. ಅದೇ ನಂಬಿಕೆಯಿಂದಾಗಿ ದೂರುದಾರ ಪುನಃ ₹ 2.04 ಲಕ್ಷ ಹೂಡಿಕೆ ಮಾಡಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.