ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ – ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:25 IST
Last Updated 14 ಜನವರಿ 2018, 19:25 IST
ಕಾರ್ಯಕ್ರಮದಲ್ಲಿ ಶಿಕ್ಷಕರಾದ (ಕುಳಿತಿರುವವರು ಎಡದಿಂದ ಬಲಕ್ಕೆ) ಜಯಸಿಂಹ, ಕೈಲಾಶ್‌ ನೇಖರಾಜ್‌, ವರದರಾಜ್‌, ಡಿ.ವಿ.ನಾಗೇಶ್‌, ಗೋವಿಂದರಾಜು, ಲೋಕೇಶಪ್ಪ ಹಾಗೂ ಗುರುಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು. ಟಿ. ಪ್ರಭಾಕರ್‌, ಕೆ.ಸಿ.ರಾಮಮೂರ್ತಿ, ವೈ.ಎ.ನಾರಾಯಣಸ್ವಾಮಿ, ಉದ್ಯಮಿ ಆರ್.ಮಂಜುನಾಥ್‌ ಇದ್ದಾರೆ
ಕಾರ್ಯಕ್ರಮದಲ್ಲಿ ಶಿಕ್ಷಕರಾದ (ಕುಳಿತಿರುವವರು ಎಡದಿಂದ ಬಲಕ್ಕೆ) ಜಯಸಿಂಹ, ಕೈಲಾಶ್‌ ನೇಖರಾಜ್‌, ವರದರಾಜ್‌, ಡಿ.ವಿ.ನಾಗೇಶ್‌, ಗೋವಿಂದರಾಜು, ಲೋಕೇಶಪ್ಪ ಹಾಗೂ ಗುರುಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು. ಟಿ. ಪ್ರಭಾಕರ್‌, ಕೆ.ಸಿ.ರಾಮಮೂರ್ತಿ, ವೈ.ಎ.ನಾರಾಯಣಸ್ವಾಮಿ, ಉದ್ಯಮಿ ಆರ್.ಮಂಜುನಾಥ್‌ ಇದ್ದಾರೆ   

ಬೆಂಗಳೂರು: ಕಬೀರ ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ 100 ದಿನಗಳ ಉಚಿತ ತರಗತಿ ಕಾರ್ಯಕ್ರಮದಲ್ಲಿ ಸಂಭಾವನೆ ಪಡೆಯದೆಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಏಳು ಶಿಕ್ಷಕರನ್ನು ಭಾನುವಾರ ಸನ್ಮಾನಿಸಲಾಯಿತು.

2016–17ನೇ ಸಾಲಿನಲ್ಲಿ ತರಬೇತಿ ಪಡೆದು ಹೆಚ್ಚು ಅಂಕ ಗಳಿಸಿದ ಏಳು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ತರಗತಿಗಳ ಸಮಾರೋಪದಲ್ಲಿ ಮಾತನಾಡಿದ ಆಶ್ರಮದ ಅಧ್ಯಕ್ಷ ಟಿ.ಪ್ರಭಾಕರ್‌, ‘32 ವರ್ಷಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಮುಂದಿನವರ್ಷದಿಂದ ಪಿ.ಯು.ಸಿ ವಿದ್ಯಾರ್ಥಿಗಳಿಗೂ ತರಬೇತಿ ನೀಡುವ ಚಿಂತನೆ ಇದೆ. ಸಿ.ಇ.ಟಿ ತರಗತಿಯನ್ನೂ ಉಚಿತವಾಗಿ ನಡೆಸುತ್ತೇವೆ’ ಎಂದರು.

ADVERTISEMENT

ಆಸ್ಪತ್ರೆಗಳು, ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಆದರೆ, ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ ಪಡೆದು 70 ವರ್ಷ ಕಳೆದರೂ ಯಾವ ಸರ್ಕಾರಗಳೂ ಶಾಲೆಗಳ ಅಭಿವೃದ್ಧಿ ಕಡೆ ಗಮನಹರಿಸಲೇ ಇಲ್ಲ ಎಂದು ಹೆಬ್ಬಾಳ ಕ್ಷೇತ್ರದ ಶಾಸಕ ವೈ.ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳನ್ನು ಈಗಲೂ ಅಭಿವೃದ್ಧಿಪಡಿಸದಿದ್ದರೆ ದೇವರೂ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದರು.

ವಿಶೇಷ ತರಗತಿಗಳಲ್ಲಿ ಹೆಚ್ಚುವರಿ ಬೋಧನೆ ಒದಗಿಸಿದ ಬಳಿಕವೂ ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಅಂತಹವರನ್ನು ಗುರುತಿಸಿ ತರಬೇತಿ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಸಲಹೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.