ADVERTISEMENT

70 ಅಪಾಯಕಾರಿ ಕಟ್ಟಡಗಳ ಮರು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 20:19 IST
Last Updated 16 ಜನವರಿ 2018, 20:19 IST

ಬೆಂಗಳೂರು: ಅಗ್ನಿಸುರಕ್ಷತಾ ಕ್ರಮ ಕೈಗೊಳ್ಳದ ಕಾರಣಕ್ಕೆ ನಗರದ 70 ಪಬ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಗಳಿಗೆ ನೋಟಿಸ್‌ ನೀಡಿದ್ದ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಅಧಿಕಾರಿಗಳು, ಅಂಥ ಕಟ್ಟಡಗಳಿಗೆ ಈಗ ಪುನಃ ಭೇಟಿ ನೀಡಲು ತೀರ್ಮಾನಿಸಿದ್ದಾರೆ.

‘ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕಾಲಾವಕಾಶ ನೀಡಿದ್ದೆವು. ಈಗಾಗಲೇ ಅವರಿಗೆ ನೋಟಿಸ್‌ ಜಾರಿ ಮಾಡಿದ್ದೆವು. ಈ ನೋಟಿಸ್‌ ಅನ್ವಯ ಕಟ್ಟಡಗಳ ಮಾಲೀಕರು ಕ್ರಮಕೈಗೊಂಡಿದ್ದಾರೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳ ತಂಡ ಕಟ್ಟಡಗಳಿಗೆ ಹೋಗಲಿದೆ’ ಎಂದು ಇಲಾಖೆಯ ಐಜಿಪಿ ಸೋಮೇಂದ್ರ ಮುಖರ್ಜಿ ಅವರು ತಿಳಿಸಿದರು.

‘ಇಂದಿರಾನಗರ, ಕೋರಮಂಗಲ, ಜೆ.ಪಿ.ನಗರ, ಜಯನಗರ, ಬನ್ನೇರುಘಟ್ಟ ರಸ್ತೆಯಲ್ಲಿ ಹೆಚ್ಚು ಅಂಥ ಕಟ್ಟಡಗಳಿವೆ. ಪ್ರತಿ ಕಟ್ಟಡದ ಬಗ್ಗೆಯೂ ಅಧಿಕಾರಿಗಳು ವರದಿ ನೀಡಲಿದ್ದಾರೆ. ಅದರನ್ವಯ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.