ADVERTISEMENT

ಹಕ್ಕುಪತ್ರ ವಿತರಣೆ ಕಾರ್ಯ ಮುಂದೂಡಿಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:32 IST
Last Updated 18 ಜನವರಿ 2018, 19:32 IST
ಹಕ್ಕುಪತ್ರ ವಿತರಣೆ ಕಾರ್ಯ ಮುಂದೂಡಿಕೆ: ಪ್ರತಿಭಟನೆ
ಹಕ್ಕುಪತ್ರ ವಿತರಣೆ ಕಾರ್ಯ ಮುಂದೂಡಿಕೆ: ಪ್ರತಿಭಟನೆ   

ಬೆಂಗಳೂರು: ದಾಸನಪುರ ಹೋಬಳಿಯ ಮಾದನಾಯಕನ ಹಳ್ಳಿಯಲ್ಲಿ ತಾತ್ಕಾಲಿಕ ಹಕ್ಕು ಪತ್ರ ವಿತರಣೆಗೆ ದಿನವನ್ನು ಗೊತ್ತು ಪಡಿಸಲಾ
ಗಿದ್ದು, ಮಾಹಿತಿಯಿಲ್ಲದೇ ಕಾರ್ಯಕ್ರಮ ಮುಂದೂಡಿದ್ದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

‘15 ದಿನಗಳ ಹಿಂದೆ ವಿತರಣಾ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು. ಹಕ್ಕು ಪತ್ರಗಳನ್ನು ವಿತರಿಸಲು ಎಂಎಲ್‌ಸಿ ಎಂ.ನಾರಾಯಣಸ್ವಾಮಿ ಹಾಗೂ ಶಾಸಕ ವಿಶ್ವನಾಥ್‌ ಅವರನ್ನು ಆಹ್ವಾನಿಸಿದ್ದೆವು. ನಾರಾಯಣಸ್ವಾಮಿ ಅವರು ಒಂದು ದಿನ ಮುಂಚೆ ಕಾರ್ಯಕ್ರಮ ಮುಂದೂಡುವಂತೆ ಸೂಚಿಸಿದರು. ಹಾಗಾಗಿ ಮುಂದೂಡಲು ನಿರ್ಧರಿಸಿದೆವು’ ಎಂದು ಅಧಿಕಾರಿಗಳು ಹೇಳಿದರು.

ಕಾರ್ಯಕ್ರಮ ಇದೇ ಎಂದು ವಿಶ್ವನಾಥ್‌ ಅವರು ಬಂದಿದ್ದರು. ಅವರ ಮುಂದೆ ಹಕ್ಕುಪತ್ರ ಪಡೆಯಲು ವಿವಿಧ ಗ್ರಾಮಗಳಿಂದ ಬಂದಿದ್ದ ಸುಮಾರು 500 ಮಂದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಹಕ್ಕುಪತ್ರ ವಿತರಣೆ ಮಾಡಿದರೆ, ರಾಜಕಾರಣ ಮಾಡಿದಂತೆ ಆಗುತ್ತದೆ. ದಿನಗೂಲಿಯನ್ನು ನಂಬಿಕೊಂಡ ಅನೇಕರು ಕೆಲಸ ಬಿಟ್ಟು ಇಲ್ಲಿಗೆ ಬಂದಿದ್ದಾರೆ, ಅವರನ್ನು ವಾಪಸ್‌ ಕಳಿಸುವುದು ಸರಿಯಲ್ಲ. ಅಧಿಕಾರಿಗಳೇ ಪತ್ರ ವಿತರಿಸಲಿ’ ಎಂದು ಅವರು ಹೇಳಿದರು.

ಆದರೆ, ಅಧಿಕಾರಿಗಳು ಇದಕ್ಕೆ ಒಪ್ಪದಿದ್ದಾಗ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಜನರು ನಾರಾಯಣ ಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಅಧಿಕಾರಿಗಳು ಸಾಂಕೇತಿಕವಾಗಿ ಕೆಲವರಿಗೆ ಪತ್ರಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.