ADVERTISEMENT

‘ಭಾರತ ಬಲಿಷ್ಠವಾಗದಂತೆ ತಡೆಯಲು ಕೆಲ ರಾಷ್ಟ್ರಗಳ ಹುನ್ನಾರ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:51 IST
Last Updated 22 ಜನವರಿ 2018, 19:51 IST
ಪ್ರೊ. ಬಿ.ವಿ.  ಶ್ರೀಧರ ಸ್ವಾಮಿ
ಪ್ರೊ. ಬಿ.ವಿ. ಶ್ರೀಧರ ಸ್ವಾಮಿ   

ಬೆಂಗಳೂರು: ಭಾರತ ಬಲಿಷ್ಠ ರಾಷ್ಟ್ರವಾಗುವುದು ಕೆಲ ರಾಷ್ಟ್ರಗಳಿಗೆ ಇಷ್ಟವಿಲ್ಲ. ಹೀಗಾಗಿ ಭಯೋತ್ಪಾದನೆಯಂತಹ ಕೃತ್ಯಗಳಲ್ಲಿ ತೊಡಗಿ ಆಂತರಿಕ ಕಲಹ ಉಂಟುಮಾಡುತ್ತಿವೆ ಎಂದು ಪ್ರೊ. ಬಿ.ವಿ. ಶ್ರೀಧರ ಸ್ವಾಮಿ ಆರೋಪಿಸಿದರು.

ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಈಶಾನ್ಯ ರಾಜ್ಯಗಳ ಗಡಿ ಪ್ರದೇಶಗಳ ಸ್ಥಿತಿಗತಿ’ ಕುರಿತು ಅವರು ಮಾತನಾಡಿದರು.

ಅಸ್ಸಾಂ, ಮ‌ಣಿಪುರ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್‌ ರಾಜ್ಯಗಳ ಗಡಿ ಪ್ರದೇಶದ ಗ್ರಾಮಗಳು ಇಂದಿಗೂ ಉತ್ತಮ ಶಿಕ್ಷಣದ ಕೊರತೆ ಎದುರಿಸುತ್ತಿವೆ. ಅಕ್ರಮವಾಗಿ ನೆಲೆಸಿರುವ ವಿದೇಶಗರು ಹಾಗೂ ನುಸುಳುಕೋರರು ಇಲ್ಲಿ ಮಾನವ ಕಳ್ಳಸಾಗಣೆ ಹಾಗೂ ಮಾದಕವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದಾರೆ. ಅಲ್ಲದೆ ಸ್ಥಳೀಯರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.