ADVERTISEMENT

‘ದುಶ್ಚಟದಿಂದ ದೂರವಿರಲು ಕ್ರೀಡೆ ನೆರವು’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 20:28 IST
Last Updated 26 ಜನವರಿ 2018, 20:28 IST
ಸೌಮ್ಯ ರಾಮಲಿಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಕೆ.ವಾಸುದೇವ್, ಶಾಲೆಯ ಕಾರ್ಯದರ್ಶಿ ಪ್ರೊ. ಅಮರಾವತಿ, ಕಾರ್ಯನಿವಾಹಕ ನಿರ್ದೇಶಕ ರಂಜಿತ್, ಪ್ರಾಂಶುಪಾಲರಾದ ಗೀತಾ ನಾರಾಯಣನ್, ತಿರುಮಲ್ಲೇಶ್, ಸೂರ್ಯನಾರಾಯಣ್ ಹಾಗೂ ಸೌಮ್ಯ ಇದ್ದಾರೆ
ಸೌಮ್ಯ ರಾಮಲಿಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಕೆ.ವಾಸುದೇವ್, ಶಾಲೆಯ ಕಾರ್ಯದರ್ಶಿ ಪ್ರೊ. ಅಮರಾವತಿ, ಕಾರ್ಯನಿವಾಹಕ ನಿರ್ದೇಶಕ ರಂಜಿತ್, ಪ್ರಾಂಶುಪಾಲರಾದ ಗೀತಾ ನಾರಾಯಣನ್, ತಿರುಮಲ್ಲೇಶ್, ಸೂರ್ಯನಾರಾಯಣ್ ಹಾಗೂ ಸೌಮ್ಯ ಇದ್ದಾರೆ   

ಬೆಂಗಳೂರು: ಅಶಿಸ್ತು ಹಾಗೂ ದುಶ್ಚಟಗಳಿಂದ ದೂರವಿರಲು ಕ್ರೀಡೆ, ಸಾಹಿತ್ಯ, ನಾಟಕ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದು ಚಿನ್ಮಯ ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯಸ್ಥ ಕೆ.ವಾಸುದೇವ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಚಿನ್ಮಯ ವಿದ್ಯಾಮಂದಿರ ಪ್ರೌಢಶಾಲೆ ಹಾಗೂ ಎಸ್‍ವಿಆರ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಗ್ರಹಿಕೆ ಶಕ್ತಿಯ ಕೊರತೆಯುಳ್ಳ ಮಕ್ಕಳಿಗೆ ವಿಶೇಷ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಅವರ ಕಲಿಕಾ ಆಸಕ್ತಿಯನ್ನು ವೃದ್ಧಿಸಬೇಕು ಎಂದರು.

ADVERTISEMENT

ಸಾಮಾಜಿಕ ಕಾರ್ಯಕರ್ತೆ ಸೌಮ್ಯ ರಾಮಲಿಂಗಾರೆಡ್ಡಿ, ‘ಪರಿಸರ ಹಾಗೂ ವೈಜ್ಞಾನಿಕ ಅರಿವಿನ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣ ವಂಚಿತ ಮಕ್ಕಳಿಗೆ ಸರ್ಕಾರವೇ ಆಸಕ್ತಿ ವಹಿಸಿ ಶಿಕ್ಷಣ ಕೊಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.