ADVERTISEMENT

ಎಂ.ವಿ.ಜೆ ಕಾಲೇಜಿಗೆ 3 ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 19:44 IST
Last Updated 30 ಜನವರಿ 2018, 19:44 IST
ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಡಾ. ಭುಜಂಗ ರಾವ್‌ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು
ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಡಾ. ಭುಜಂಗ ರಾವ್‌ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು   

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಎಂ.ವಿ.ಜೆ ಎಂಜಿನಿಯರಿಂಗ್‌ ಕಾಲೇಜಿನ ಮೂವರು ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಾರೆ.

ಬಿ.ಇ ವೈದ್ಯಕೀಯ ಎಲೆಕ್ಟ್ರಾನಿಕ್ಸ್‌ ವಿಭಾಗದ ಜಾಯ್ಸ್ ಮ್ಯಾಥ್ಯೂ, ಎಂ.ಟೆಕ್‌ ಏರೋನಾಟಿಕಲ್ ವಿಭಾಗದ ನಾಗರಾಜ್‌ ನಾಯ್ಕ್‌ ಹಾಗೂ ಸಾರಿಗೆ ವಿಭಾಗದ ನಂದೀಕೇಶ್ವರ ಸುಲೇಗೋನ್‌ ಅವರು ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಕಾಲೇಜಿನ ವಿವಿಧ ವಿಭಾಗಗಳ 14 ವಿದ್ಯಾರ್ಥಿಗಳು ಟಾಪ್‌–10ರಲ್ಲಿ ಸ್ಥಾನ ಪಡೆದಿದ್ದಾರೆ.

ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಹಾನಿರ್ದೇಶಕ ಡಾ. ಭುಜಂಗ ರಾವ್‌ ಅವರು ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ADVERTISEMENT

ಪ್ರಾಂಶುಪಾಲ ಡಾ. ಎನ್‌.ಗುಣಶೇಖರ್‌, ‘ಫಲಿತಾಂಶದಲ್ಲಿ ನಮ್ಮ ಕಾಲೇಜಿಗೆ 4ನೇ ಸ್ಥಾನ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.