ADVERTISEMENT

13 ಕಡೆ ಗ್ರೇಡ್‌ ಸೆಪರೇಟರ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 20:06 IST
Last Updated 4 ಫೆಬ್ರುವರಿ 2018, 20:06 IST
13 ಕಡೆ ಗ್ರೇಡ್‌ ಸೆಪರೇಟರ್‌ ನಿರ್ಮಾಣ
13 ಕಡೆ ಗ್ರೇಡ್‌ ಸೆಪರೇಟರ್‌ ನಿರ್ಮಾಣ   

ಬೆಂಗಳೂರು: ನಗರದ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ನಿವಾರಿಸಿ ಸಂಚಾರ ಸುಗಮಗೊಳಿಸಲು 13 ಕಡೆ ಗ್ರೇಡ್‌ ಸೆಪರೇಟರ್‌ಗಳನ್ನು ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ.

ನಗರ ಯೋಜನಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ಜಂಕ್ಷನ್‌ಗಳ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಪ್ರಸ್ತಾವಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದ ಬಳಿಕ ಟೆಂಡರ್‌ ಕರೆಯಲಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌ ತಿಳಿಸಿದರು.

ADVERTISEMENT

ವಾಹನ ದಟ್ಟಣೆ ಹೆಚ್ಚು ಇರುವ ಜಂಕ್ಷನ್‌ಗಳಲ್ಲಿ ಗ್ರೇಡ್‌ ಸೆಪರೇಟರ್‌ಗಳನ್ನು ನಿರ್ಮಿಸುವಂತೆ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದರು. ಇವುಗಳ ನಿರ್ಮಾಣದಿಂದ ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು. ಇವು ಮೇಲ್ಸೇತುವೆಗಳಿಗೆ ಪರ್ಯಾಯವಾಗಿರುತ್ತವೆ ಎಂದು ಹೇಳಿದರು.

ನಗರದ 9 ಜಂಕ್ಷನ್‌ಗಳಲ್ಲಿ ಗ್ರೇಡ್‌ ಸೆಪರೇಟರ್‌ಗಳನ್ನು ನಿರ್ಮಿಸುವ ಪ್ರಸ್ತಾವ 2017–18ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿತ್ತು.

ಅಂಕಿ–ಅಂಶ

₹421 ಕೋಟಿ ಗ್ರೇಡ್‌ ಸೆಪರೇಟರ್‌ ನಿರ್ಮಿಸುವ ಯೋಜನೆಯ ಒಟ್ಟು ವೆಚ್ಚ

ಯಾವುದಕ್ಕೆ ಎಷ್ಟು ವೆಚ್ಚ?

ಸ್ಥಳ, ವೆಚ್ಚ

ಎಕೆಎಸ್‌ ಶಾದಿ ಮಹಲ್‌ ಜಂಕ್ಷನ್‌ನಲ್ಲಿ (ಸೇಂಟ್‌ ಜಾನ್ಸ್‌ ರಸ್ತೆ), ₹35 ಕೋಟಿ

ಕಮ್ಮನಹಳ್ಳಿ ಮುಖ್ಯರಸ್ತೆ ಮತ್ತು ನೆಹರೂ ರಸ್ತೆ ಜಂಕ್ಷನ್‌, ₹20 ಕೋಟಿ

ಬ್ಯಾಟರಾಯನಪುರದ ಎಂ.ಎಸ್‌. ಪಾಳ್ಯ ಜಂಕ್ಷನ್‌, ₹45 ಕೋಟಿ

ಹೊಸೂರು ರಸ್ತೆಯ ಸಿದ್ದಾಪುರ ಕ್ರಾಸ್‌ನಿಂದ ವಿಲ್ಸನ್‌ ಗಾರ್ಡನ್‌ 13ನೇ ಅಡ್ಡರಸ್ತೆಯವರೆಗೆ ಮೇಲ್ಸೇತುವೆ, 1ನೇ ಹಂತ, ₹45 ಕೋಟಿ

ಸುರಂಜನ್‌ ದಾಸ್‌ ರಸ್ತೆಯಿಂದ ಹಳೇ ಮದ್ರಾಸ್‌ ರಸ್ತೆಯವರೆಗೆ ಮೇಲ್ಸೇತುವೆ, ₹20 ಕೋಟಿ

ಯಲಹಂಕ ಪೊಲೀಸ್‌ ಠಾಣೆ ವೃತ್ತ, ₹31 ಕೋಟಿ

ಹೆಣ್ಣೂರು ಮುಖ್ಯರಸ್ತೆಯ ‘ವೈ’ ಜಂಕ್ಷನ್‌, ₹35 ಕೋಟಿ

ಮಾಗಡಿ ರಸ್ತೆಯ ‘ವೈ’ ಜಂಕ್ಷನ್‌–ಸುಜಾತಾ ಚಿತ್ರಮಂದಿರ ರಸ್ತೆಯ ಶಂಕರಲಿಂಗ ಪಾಂಡಿಯನ್‌ ಹೋಟೆಲ್‌, ₹30 ಕೋಟಿ

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಶಿವನಗರ 8ನೇ ಮುಖ್ಯರಸ್ತೆ ಜಂಕ್ಷನ್‌ ಮತ್ತು ಬಸವೇಶ್ವರ ನಗರ 1ನೇ ಮುಖ್ಯರಸ್ತೆ ಜಂಕ್ಷನ್‌, ₹40 ಕೋಟಿ

ಹೊಸೂರು ರಸ್ತೆಯಿಂದ ಆಡುಗೋಡಿ ಜಂಕ್ಷನ್‌ ಹಾಗೂ ಸರ್ಜಾಪುರ ರಸ್ತೆ ಜಂಕ್ಷನ್‌, 1ನೇ ಹಂತ, ₹50 ಕೋಟಿ

ಸದಾಶಿವನಗರದ ಭಾಷ್ಯಂ ವೃತ್ತ, ₹25 ಕೋಟಿ

ಸದಾಶಿವನಗರ ಪೊಲೀಸ್‌ ಠಾಣೆ ಜಂಕ್ಷನ್‌, ₹20 ಕೋಟಿ

ಮತ್ತಿಕೆರೆ ಮುಖ್ಯರಸ್ತೆಯಿಂದ ಸಿಎನ್‌ಆರ್‌ ವೃತ್ತ ಮತ್ತು ಯಶವಂತಪುರ ವೃತ್ತದ ಸಂಪರ್ಕ ರಸ್ತೆ, ₹25 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.