ADVERTISEMENT

‘ಪ್ರತಿ ವಾರ್ಡ್‌ನಲ್ಲಿ ಕಸ ಸಂಸ್ಕರಣ ಕೇಂದ್ರ ಸ್ಥಾಪಿಸಿ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:30 IST
Last Updated 7 ಫೆಬ್ರುವರಿ 2018, 20:30 IST

ಬೆಂಗಳೂರು: ‘ನಗರದಲ್ಲಿ ಕಸದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರತಿ ವಾರ್ಡ್‌ನಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪಿಸಬೇಕು’ ಎಂದು ಬಿಬಿಎಂಪಿಯ ತಾಂತ್ರಿಕ ಸಲಹೆಗಾರ ಎಸ್‌.ವಿ.ವೆಂಕಟೇಶ ಮೂರ್ತಿ ತಿಳಿಸಿದರು.

ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್‌ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಬೆಂಗಳೂರು ನಗರದ ಕಸ ವಿಲೇವಾರಿ’ ಕುರಿತ ಸಂವಾದದಲ್ಲಿ ಮಾತನಾಡಿ, ‘ಸಂಸ್ಕರಿಸಿದ ಕಸ ಸಾಗಣೆ ದೊಡ್ಡ ಸಮಸ್ಯೆ ಆಗಿದೆ. ಆಯಾ ಪ್ರದೇಶಕ್ಕೆ ಪ್ರತ್ಯೇಕ ಸಂಸ್ಕರಣ ಘಟಕ ಸ್ಥಾಪಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಇದು ಜಾರಿಗೆ ಬಂದರೆ ಒಳಿತು’ ಎಂದರು.

‘ನಗರದಲ್ಲಿ ಪ್ರತಿದಿನ 4,200 ಟನ್‌ಗಳಷ್ಟು ಕಸ ಉತ್ಪತ್ತಿಯಾಗುತ್ತದೆ. ಎಲ್ಲ ಘಟಕಗಳಿಂದ ಒಟ್ಟು 2,800 ಟನ್‌ಗಳಷ್ಟು ಕಸ ಸಂಸ್ಕರಣೆಯಾಗುತ್ತಿದೆ. ಆದರೆ, ಸಂಸ್ಕರಣೆಯಾದ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.