ADVERTISEMENT

ಐದು ವರ್ಷಗಳಲ್ಲಿ ₹7.60 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 16:07 IST
Last Updated 27 ಅಕ್ಟೋಬರ್ 2023, 16:07 IST

ಬೆಂಗಳೂರು: ಐದು ವರ್ಷಗಳಲ್ಲಿ ಕರ್ನಾಟಕವು ₹7.60 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದು ಸಾವಯವ ಆಹಾರ ಉತ್ಪಾದಕರು ಮತ್ತು ಮಾರ್ಕೆಟಿಂಗ್‌ ಏಜೆನ್ಸಿಗಳ ಒಕ್ಕೂಟ (ಸಿಒಐಐ) ಹಾಗೂ ರಫ್ತು ಉತ್ತೇಜನಾ ಮಂಡಳಿ ನಡೆಸಿದ ಅಧ್ಯಯನ ವರದಿಯ ಮಾಹಿತಿ. 

2022-23ನೇ ಸಾಲಿನಲ್ಲಿ ₹4,51,516.2 ಕೋಟಿ, 2021-22ರಲ್ಲಿ ₹79,816.4 ಕೋಟಿ, 2020-21ರಲ್ಲಿ ₹74,967.7 ಕೋಟಿ, 2019-20ನೇ ಸಾಲಿನಲ್ಲಿ ₹94,361.8 ಕೋಟಿ ಹಾಗೂ 2018-19ರಲ್ಲಿ ₹59,273.8 ಕೋಟಿ ಹೂಡಿಕೆಯಾಗಿದೆ. 2022-23ರಲ್ಲಿ ₹39,664.05 ಕೋಟಿ, 2021-22ರಲ್ಲಿ ₹21,336.2 ಕೋಟಿ, 2020-21ರಲ್ಲಿ ₹11,415.5 ಕೋಟಿ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ‌ಒಕ್ಕೂಟದ ಅಧ್ಯಕ್ಷ  ಡಿ.ಎಸ್‌.ರಾವತ್ ಮಾಹಿತಿ ನೀಡಿದ್ದಾರೆ.

ADVERTISEMENT

2022-23ನೇ ಸಾಲಿನಲ್ಲಿ ₹16,43,466.3 ಕೋಟಿ, ₹8,22,070.4 ಕೋಟಿ ಅನುಷ್ಠಾನದ ಹಂತದಲ್ಲಿವೆ. ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನ ಪೂರ್ಣಗೊಂಡ ನಂತರ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಸೃಷ್ಟಿಯಾಗಲಿವೆ ಎಂದಿದ್ದಾರೆ.

2022-23ನೇ ಸಾಲಿನಲ್ಲಿ ಖಾಸಗಿ ವಲಯದಲ್ಲಿ ₹4,07,855.5 ಕೋಟಿ ಘೋಷಿಸಲಾದ ಹೊಸ ಹೂಡಿಕೆ. ಇದೇ ಅವಧಿಯಲ್ಲಿ ವಿದೇಶಿ ಖಾಸಗಿ ಹೂಡಿಕೆಯಲ್ಲೂ ಹೆಚ್ಚಳವಾಗಿದೆ. ₹66,334.9 ಕೋಟಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.  

ಕರ್ನಾಟಕ 8.5 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನೆಲೆಯಾಗಿದೆ. 60 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ, ಜಾಗತಿಕ ಸ್ಪರ್ಧೆಯಿಂದಾಗಿ ಸಣ್ಣ ಉದ್ಯಮಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.