ADVERTISEMENT

31 ವರ್ಷದ ವ್ಯಕ್ತಿಯ ಮುಖದಲ್ಲಿ 8 ಕೆ.ಜಿ ಗೆಡ್ಡೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 11:32 IST
Last Updated 1 ಅಕ್ಟೋಬರ್ 2021, 11:32 IST

ಬೆಂಗಳೂರು:31 ವರ್ಷದ ವ್ಯಕ್ತಿಯೊಬ್ಬರ ಮುಖದಲ್ಲಿ ಬೆಳೆದಿದ್ದ 8 ಕೆ.ಜಿಯ ಗೆಡ್ಡೆಯನ್ನು ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ.

ಓಡಿಶಾದ ಮನ್ಭೋದ್‌ ಎಂಬುವರಿಗೆ ಬಾಲ್ಯದಲ್ಲಿ ಸಣ್ಣದಾಗಿ ಗೆಡ್ಡೆ ಕಾಣಿಸಿಕೊಂಡಿತ್ತು. 17 ವರ್ಷಗಳಿಂದ ಈ ಗೆಡ್ಡೆಯು ನಿರಂತರವಾಗಿ ಬೆಳವಣಿಗೆ ಹೊಂದಿದೆ. ಹಾನಿಕಾರಕವಲ್ಲದ ಈ ಗಡ್ಡೆಯನ್ನು ವೈದ್ಯರು ‘ಪ್ಲೆಕ್ಸಿಫಾರ್ಮ್ ನ್ಯೂರೋಫೈಬ್ರೊಮಾ’ ಎಂದು ಕರೆದಿದ್ದಾರೆ. ಮುಖದ ಬಲಭಾಗದಲ್ಲಿ ಇದು ಜೋತಾಡುತ್ತಿದ್ದರಿಂದ ದೈನಂದಿನ ಜೀವನಕ್ಕೆ ಸಮಸ್ಯೆಯಾಗಿತ್ತು.ಆರು ತಿಂಗಳ ಅವಧಿಯಲ್ಲಿ 16 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳ ಮೂಲಕ ಗೆಡ್ಡೆಯನ್ನು ತೆಗೆಯಲಾಗಿದೆ.ಕ್ರೌಡ್ ಫಂಡಿಂಗ್‌ ಮೂಲಕ ಈ ಶಸ್ತ್ರಚಿಕಿತ್ಸೆ ಸಾಕಾರವಾಯಿತು ಎಂದು ಆಸ್ಪತ್ರೆ ತಿಳಿಸಿದೆ.

‘ವ್ಯಕ್ತಿಯ ತಲೆಯಿಂದ ಕುತ್ತಿಗೆವರೆಗೆ ಗೆಡ್ಡೆ ಆವರಿಸಿಕೊಂಡಿತ್ತು. ತಪಾಸಣೆ ನಡೆಸಿದ ಬಳಿಕ ಇದು ನಿಷ್ಕ್ರಿಯಗೊಂಡಿದೆ ಎಂದು ಪರಿಗಣಿಸಲಾಯಿತು. ಸಿಟಿ ಸ್ಕ್ಯಾನ್ ನಡೆಸಿದಾಗ ಮುಖದ ಮೂಳೆಗಳು ನಾಶವಾಗಿರುವುದು ದೃಢಪಟ್ಟಿತು. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳ ನೆರವಿನಿಂದ ರಕ್ತಸ್ರಾವವನ್ನು ತಡೆದು, ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು’ ಎಂದು ಆಸ್ಪತ್ರೆಯ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರವಿ ಗೋಪಾಲ್ ವರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.