ADVERTISEMENT

ಕೋವಿಡ್‌ ಆರೈಕೆ ಕೇಂದ್ರ: 308 ವೈದ್ಯರೂ ಸೇರಿ 852 ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 20:54 IST
Last Updated 15 ಜುಲೈ 2020, 20:54 IST

ಬೆಂಗಳೂರು: ನಗರದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು 308 ವೈದ್ಯರು, 34 ಶುಶ್ರೂಷಕಿಯರು ಹಾಗೂ 56 ಸಹಾಯಕ ಸಿಬ್ಬಂದಿ ಸಹಿತ ಒಟ್ಟು 852 ಸಿಬ್ಬಂದಿಯನ್ನು ಬಿಬಿಎಂಪಿ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿಕೊಂಡಿದೆ.

ವೈದ್ಯಕೀಯ ಸಿಬ್ಬಂದಿಯ ನೇಮಕಕ್ಕಾಗಿ ಪುರಭವನದಲ್ಲಿ ಶುಕ್ರವಾರದಿಂದ ಬುಧವಾರದವರೆಗೆ (ರಜಾದಿನ ಹೊರತಾಗಿ) ನೇರ ಸಂದರ್ಶನ ನಡೆಸಲಾಗಿತ್ತು. 19 ಎಂಬಿಬಿಎಸ್‌ ವೈದ್ಯರು, 155 ದಂತ ವೈದ್ಯರು, 75 ಆಯುರ್ವೇದ ವೈದ್ಯರು ಸಹಿತ ಒಟ್ಟು 308 ವೈದ್ಯರಿಗೆ ಬಿಬಿಎಂಪಿ ವತಿಯಿಂದ ನೇಮಕಾತಿ ಪತ್ರ ನೀಡಲಾಗಿದೆ. 428 ಡಿ ಗುಂಪಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

‘ಆಯ್ಕೆ ಆದವರೆಲ್ಲರಿಗೂ ಆದೇಶ ಪತ್ರ ನೀಡಲಾಗಿದೆ. ಶೀಘ್ರವೇ ಇವರನ್ನು ನಿರ್ದಿಷ್ಟ ಕೋವಿಡ್ ಆರೈಕೆ ಕೇಂದ್ರಗಳಿಗೆ ನಿಯೋಜಿಸಲಾಗುವುದು’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಆಡಳಿತ) ಅನ್ಬುಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.