ADVERTISEMENT

ಕದ್ದ ಲಾಕರ್ ಪತ್ತೆ ಮಾಡಿದ ‘ಲಕ್ಷ್ಮಿ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 20:13 IST
Last Updated 25 ಜುಲೈ 2021, 20:13 IST

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಅಮೆಜಾನ್ ಕಂಪನಿ ಗೋದಾಮಿನಿಂದ ಕಳವು ಮಾಡಲಾಗಿದ್ದ ಲಾಕರನ್ನು ಶ್ವಾನದಳ ಪತ್ತೆ ಮಾಡಿದೆ.

‘ಜುಲೈ 17ರ ರಾತ್ರಿ ಗೋದಾಮಿಗೆ ನುಗ್ಗಿದ್ದ ಕಳ್ಳರು, ಲಕ್ಷಾಂತರ ರೂಪಾಯಿ ಹಣವಿದ್ದ ಲಾಕರ್‌ ಕದ್ದುಕೊಂಡು ಹೋಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳ ಪತ್ತೆಗಾಗಿ ಶ್ವಾನದಳದ ನೆರವು ಪಡೆಯಲಾಗಿತ್ತು. ಘಟನಾ ಸ್ಥಳಕ್ಕೆ ‘ಲಕ್ಷ್ಮಿ’ ಹೆಸರಿನ ಶ್ವಾನದ ಜೊತೆ ಬಂದಿದ್ದ ಸಿಬ್ಬಂದಿ, ಹಲವೆಡೆ ಹುಡುಕಾಡಿದರು. ಗೋದಾಮು ಸಮೀಪದಲ್ಲಿದ್ದ ಪೊದೆಯಲ್ಲಿ ಬಿಸಾಕಿದ್ದ ಲಾಕರನ್ನು ಶ್ವಾನ ಪತ್ತೆ ಮಾಡಿತು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.