ಬೆಂಗಳೂರು: ಏರ್‌ಟೆಲ್ ಕಂಪನಿ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ್ದ ವಂಚಕನ ಮಾತು ನಂಬಿದ್ದ ನಗರದ ನಿವಾಸಿಯೊಬ್ಬರು₹ 10 ರೀಚಾರ್ಜ್ ಮಾಡಿ ₹ 5.85 ಲಕ್ಷ ಕಳೆದುಕೊಂಡಿದ್ದಾರೆ.
ಈ ವಂಚನೆ ಬಗ್ಗೆ ಬ್ಯಾಂಕ್ ಉದ್ಯೋಗಿ ಯೊಬ್ಬರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
‘ದೂರುದಾರರ ಮೊಬೈಲ್‌ಗೆ ಕರೆ ಮಾಡಿದ್ದ ವಂಚಕ, ‘ನಿಮ್ಮ ಏರ್‌ಟೆಲ್ ನಂಬರ್ ಸದ್ಯದಲ್ಲೇ ನಿಷ್ಕ್ರಿಯವಾಗಲಿದೆ. ಹೀಗಾಗಿ, ಗ್ರಾಹಕರ ಮಾಹಿತಿ (ಕೆವೈಸಿ) ನವೀಕರಿಸಬೇಕು. ಅದಕ್ಕಾಗಿ ಆ್ಯಪೊಂದನ್ನು ಇನ್‌ಸ್ಟಾಲ್ ಮಾಡಿ ₹10 ರೀಚಾರ್ಜ್ ಮಾಡಿಸಬೇಕು’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ರೀಚಾರ್ಚ್ ಮಾಡಿಸಿದ್ದರು’. ‘ಅದಾದ ಕೆಲ ನಿಮಿಷಗಳಲ್ಲಿ ದೂರುದಾರರ 4 ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹ 5.85 ಲಕ್ಷ ಕಡಿತವಾಗಿದೆ. ಆರೋಪಿ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ’ ಎಂದೂ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.