
ಬೆಂಗಳೂರು: ಕೇಂದ್ರ ಸರ್ಕಾರವು ಕಬ್ಬು ಬೆಳೆಗಾರರಿಗೆ ನಿಗದಿ ಮಾಡಿರುವ ₹3,550 ಎಫ್.ಆರ್.ಪಿ ದರವನ್ನು ನೀಡಲು ಹಿಂಜರಿಯುತ್ತಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕ್ರಮವನ್ನು ಹಾಗೂ ಮಾಲೀಕರ ಪರವಾದ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕಬ್ಬು ಬೆಳೆಗಾರರು ನಡೆಸುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಬೆಂಬಲವಿದೆ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದ್ದಾರೆ.
‘ಪಕ್ಕದ ಮಹಾರಾಷ್ಟ್ರ ತಮಿಳುನಾಡು ರಾಜ್ಯದ ಕಾರ್ಖಾನೆಗಳು ಕೇಂದ್ರದ ಎಫ್‌ಆರ್‌ಪಿ ದರದಲ್ಲಿ ಲಕ್ಷಾಂತರ ಟನ್ ಕಬ್ಬನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ನಮ್ಮ ರೈತರ ಹೋರಾಟಕ್ಕೆ ಜಯ ಸಿಗುವವರೆಗೆ ಆಮ್ ಆದ್ಮಿ ಪಕ್ಷವು ರೈತರೊಂದಿಗೆ ಇರಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.