
ಸಾಂದರ್ಭಿಕ ಚಿತ್ರ
ಪೀಣ್ಯ ದಾಸರಹಳ್ಳಿ: ಅಬ್ಬಿಗೆರೆಯಲ್ಲಿ ಪುನರುಜ್ಜೀವನವಾಗಿರುವ ಸೀತಾ ರಾಮಾಂಜನೇಯ ಸ್ವಾಮಿ ಹಾಗೂ ಪದ್ಮಾವತಿ ಸಮೇತ ವೆಂಕಟೇಶ್ವರ ಸ್ವಾಮಿ ದೇವಾಲಯ ನ.2 ರಂದು ಉದ್ಘಾಟನೆಯಾಗಲಿದೆ ಎಂದು ದೇಗುಲದ ಟ್ರಸ್ಟ್ ಮುಖ್ಯಸ್ಥ ಕೆ.ನಾಗಭೂಷಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಆರ್. ಮಂಜುನಾಥ್ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಅ.31 ರಿಂದ ನ.3 ರವರೆಗೆ 5 ದಿನಗಳ ಕಾಲ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ನ.2 ರವರೆಗೆ ಕುಂಭಾಭಿಷೇಕ ಮತ್ತು ಪೂಜಾ ವಿಧಿ ವಿಧಾನಗಳು ನಡೆಯಲಿವೆ ಎಂದು ವಿವರಿಸಿದರು.
ಮೊದಲಿಗೆ ಸೀತಾರಾಮಾಂಜನೇಯ ವಿಗ್ರಹಗಳಿದ್ದು ಈಗ ಪದ್ಮಾವತಿ ಸಮೇತ ವೆಂಕಟೇಶ್ವರ ಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.