ಬೆಂಗಳೂರು: ಪಾಲಿಕೆಯು 2020–21ನೇ ಸಾಲಿನ ಬಜೆಟ್ ಪುಸ್ತಕವನ್ನು ಎಲ್ಲಾ ಸದಸ್ಯರಿಗೆ ಕೂಡಲೇ ಒದಗಿಸಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದ್ದಾರೆ.
‘ಇದೇ 17ರಂದು ತಲುಪಿಸುವುದಾಗಿ ಕೌನ್ಸಿಲ್ ಸಭೆಯಲ್ಲಿ ಮೇಯರ್ ಭರವಸೆ ನೀಡಿದ್ದರು.ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿ ತಿಂಗಳು ಕಳೆದರೂ ಪುಸ್ತಕ ಸದಸ್ಯರ ಕೈಗೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.
‘ಸದಸ್ಯರ ಅವಧಿ 2 ತಿಂಗಳಷ್ಟೇ ಇದೆ. ತಮ್ಮ ವಾರ್ಡ್‌ಗೆ ದೊರೆತಿರುವ ಅನುದಾನದ ವಿವರ ಪಡೆಯಲು ಸಾಧ್ಯವಾಗುತ್ತಿಲ್ಲ‘ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.