ADVERTISEMENT

ಅಕಾಡೆಮಿಗಳ ನೇಮಕ ರದ್ದು ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:04 IST
Last Updated 16 ಸೆಪ್ಟೆಂಬರ್ 2019, 20:04 IST

ಬೆಂಗಳೂರು: ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಹೋರಾಟ ನಡೆಸಲು ರಂಗ ಗೆಳೆಯರು ನಿರ್ಧರಿಸಿದ್ದಾರೆ.

ನಗರದಲ್ಲಿ ಸೋಮವಾರ ಸಮಾಲೋಚನಾ ಸಭೆ ನಡೆಸಿದ ಕಲಾವಿದರು, ಸರ್ಕಾರದ ಈ ನಿರ್ಧಾರದ ಬಗ್ಗೆ ಆಂದೋಲನದ ಭಾಗವಾಗಿ ವಿಚಾರಸಂಕಿರಣ ಮತ್ತು ಸಮಾವೇಶಗಳನ್ನು ಆಯೋಜಿಸಲು ತೀರ್ಮಾನಿಸಿದರು.

‘ಅಕಾಡೆಮಿಗಳ ಬೈಲಾ ಪ್ರಕಾರ ಒಮ್ಮೆ ಅಕಾಡೆಮಿಗೆ ನೇಮಕವಾದ ಅಧ್ಯಕ್ಷರನ್ನು ಮೂರು ವರ್ಷಗಳ ಅವಧಿ ಮುಗಿಯುವ ತನಕ ಬದಲಾಯಿಸುವಂತಿಲ್ಲ. ಬರಗೂರು ರಾಮಚಂದ್ರಪ್ಪ ನೀಡಿರುವ ಸಾಂಸ್ಕೃತಿಕ ನೀತಿಯ ವರದಿ ಕೂಡ ಇದನ್ನೇ ಹೇಳುತ್ತದೆ. ಆದರೆ, ಸರ್ಕಾರ ನಡೆಸುವವರು ಇವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಜಿ. ಲೋಕೇಶ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.