ADVERTISEMENT

₹ 55,000 ಲಂಚ: ಸರ್ವೇಯರ್ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 20:01 IST
Last Updated 2 ಜುಲೈ 2019, 20:01 IST
ಕೆ.ಪಿ. ನಾಗಪ್ಪ
ಕೆ.ಪಿ. ನಾಗಪ್ಪ   

ಬೆಂಗಳೂರು: ಬಾಗಲಗುಂಟೆ ಗ್ರಾಮದಲ್ಲಿ ಜಮೀನೊಂದರ ಪೋಡಿ ಮಾಡಿಕೊಡಲು ₹55,000 ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲ್ಲೂಕು ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯ ಸರ್ವೇಯರ್ ಕೆ.ಪಿ. ನಾಗಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಜಮೀನು ಮಾಲೀಕರು ಕಳೆದ ವರ್ಷದ ಡಿ.12ರಂದು ನಾಗಪ್ಪ ಅವರನ್ನು ಸಂಪರ್ಕಿಸಿ, ಪೋಡಿ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಆಗ ನಾಗಪ್ಪ ₹ 55,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ (ಜುಲೈ 2ರಂದು) ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದರು.

ಬಂಧಿತರಿಂದ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.