ADVERTISEMENT

ಬೆಂಗಳೂರು | ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 20:53 IST
Last Updated 31 ಜುಲೈ 2020, 20:53 IST

ಬೆಂಗಳೂರು: ಭ್ರಷ್ಟಾಚಾರ ನಡೆಯು ತ್ತಿತ್ತು ಎನ್ನಲಾದ ದೇವನಹಳ್ಳಿ, ಕೆ.ಆರ್‌.ಪುರ ಹಾಗೂ ಬಿದಿರಹಳ್ಳಿ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಸಿಸಿಬಿ ಪೊಲೀಸರು ಗುರುವಾರ ದಾಳಿ ಮಾಡಿದರು.

ಎಸಿಬಿ ಎಸ್ಪಿ ಕಲಾಕೃಷ್ಣ ಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಕಚೇರಿಗಳಲ್ಲಿರುವ ಕಡತಗಳನ್ನು ಪೊಲೀಸರು ಪರಿಶೀಲಿಸಿದರು.

‘ಸರ್ಕಾರಿ ಕೆಲಸ ಮಾಡಲು ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದ ಮಾಹಿತಿ ಇತ್ತು. ಹೀಗಾಗಿ, ದಾಳಿ ಮಾಡಲಾಗಿದೆ. ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ADVERTISEMENT

ಬಹುಮಾನ ಆಮಿಷ ₹59 ಸಾವಿರ ವಂಚನೆ ಕಾರು ಬಹುಮಾನ ಬಂದಿರುವ ಆಮಿಷವೊಡ್ಡಿದ್ದ ಸೈಬರ್ ವಂಚಕರು, ನಗರದ ನಿವಾಸಿ ಶ್ರೀನಿವಾಸ್ ಎಂಬುವರಿಂದ ₹59,200 ಪಡೆದು ವಂಚಿಸಿದ್ದಾರೆ. ಈ ಸಂಬಂಧ ಶ್ರೀನಿವಾಸ್ ಅವರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಹೊಸಕೆರೆಹಳ್ಳಿ ನಿವಾಸಿಯಾದ ಶ್ರೀನಿವಾಸ್ (76) ಅವರ ಮೊಬೈಲ್‌ಗೆ ಕೆಲದಿನಗಳ ಹಿಂದೆ ಸಂದೇಶವೊಂದು ಬಂದಿತ್ತು. ‘ನ್ಯಾಪ್ಟಾಲ್ ಆನ್ಲೈನ್ ಶಾಪಿಂಗ್ ಕಂಪನಿಯ ಲಕ್ಕಿ ಡ್ರಾ‌ನಲ್ಲಿ ಎಕ್ಸ್ಯುವಿ 500 ಕಾರು ಬಹುಮಾನ ಬಂದಿದೆ’ ಎಂದು ಸಂದೇಶದಲ್ಲಿ ಬರೆ ಯಲಾಗಿತ್ತು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.

‘ಸಂದೇಶ ನಿಜವೆಂದು ತಿಳಿದ ಶ್ರೀನಿವಾಸ್, ಸಂದೇಶದಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದರು. ಬಹುಮಾನ ಪಡೆಯಬೇಕಾದರೆ ತೆರಿಗೆ ಹಾಗೂ ನೋಂದಣಿ ಶುಲ್ಕ ಪಾವತಿಸಬೇಕೆಂದು ಹೇಳಿದ್ದರು. ಶ್ರೀನಿವಾಸ್, ಆರೋಪಿಗಳ ಖಾತೆಗೆ ₹59,200 ಜಮೆ ಮಾಡಿದ್ದರು. ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.