ಸಾಂದರ್ಭಿಕ ಚಿತ್ರ
ಬೆಂಗಳೂರು: ಪಾನಮತ್ತ ಚಾಲನೆಯಿಂದ ಅಪಘಾತವಾಗಿ ಯಾರಾದರೂ ಮೃತಪಟ್ಟರೆ ಆರೋಪಿ ಚಾಲಕನ ವಿರುದ್ಧ ಐಪಿಸಿ 304 (ಕೊಲೆ ಉದ್ದೇಶವಿಲ್ಲದೆ ನಡೆದ ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪಘಾತ ಉಂಟು ಮಾಡಿದ ಚಾಲಕ, ಮೃತರು ಹಾಗೂ ಗಾಯಾಳುಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುವುದು. ಚಾಲಕ ಮದ್ಯ ಕುಡಿದಿದ್ದು ಖಾತ್ರಿಯಾಗುತ್ತಿದ್ದಂತೆ ಐಪಿಸಿ 304 ಸೆಕ್ಷನ್ ಸೇರಿಸಲಾಗುವುದು. ಇತ್ತೀಚೆಗೆ ಸಂಭವಿಸಿದ್ದ 8 ಅಪಘಾತ ಪ್ರಕರಣಗಳಲ್ಲಿ ಈಗಾಗಲೇ ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.
‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮದ್ಯ ಕುಡಿದು ಚಾಲನೆ ಮಾಡುವವರನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಭಾರಿ ವಾಹನಗಳಿಗೆ ನಿರ್ಬಂಧ: ‘ಡಿ. 31ರಂದು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಅನುಚೇತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.