ADVERTISEMENT

ನೆಲಮಂಗಲ: ಗಾರ್ಮೆಂಟ್ಸ್‌ ಬಸ್‌ ಹರಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 19:27 IST
Last Updated 24 ಡಿಸೆಂಬರ್ 2024, 19:27 IST
ನಳಿನಾ
ನಳಿನಾ   

ನೆಲಮಂಗಲ: ಮಾಕಳಿಯ ಸಿದ್ಧ ಉಡುಪು ಕಾರ್ಖಾನೆ ಎದುರು ಮಹಿಳೆಯ ಮೇಲೆ ಬಸ್‌ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಸಿದ್ಧ ಉಡುಪು ಕಾರ್ಖಾನೆ ಉದ್ಯೋಗಿ, ಕೊರಟಗೆರೆ ಹುಲುವಂಗಲ ಗ್ರಾಮದ ನಿವಾಸಿ ನಳಿನಾ(24) ಮೃತಪಟ್ಟವರು.

ಬೆಂಗಳೂರು ಉತ್ತರ ತಾಲ್ಲೂಕಿನ ಮಾಕಳಿಯ ಗೋಲ್ಡನ್‌ ಸೀಮ್ಸ್‌ ಗಾರ್ಮೆಂಟ್ಸ್‌ ಎದುರು ಘಟನೆ ನಡೆದಿದೆ. ಕಾರ್ಮಿಕರನ್ನು ಕರೆತರುವ ಬಸ್‌ ಇಳಿದು ಗಾರ್ಮೆಂಟ್ಸ್‌ಗೆ ನಡೆದು ಹೋಗುತ್ತಿದ್ದಾಗ ನಳಿನಾ ಮೇಲೆ ಅದೇ ಗಾರ್ಮೆಂಟ್ಸ್‌ನ ಇನ್ನೊಂದು ಬಸ್‌ ಹರಿದಿದೆ. ನಳಿನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಪರಿಹಾರಕ್ಕೆ ಆಗ್ರಹ: ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದ್ದು, ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರಾಜ್ಯ ಗಾರ್ಮೆಂಟ್ಸ್‌ ಮತ್ತು ಟೆಕ್ಸ್‌ಟೈಲ್ಸ್‌ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.