ADVERTISEMENT

ಬೆಂಗಳೂರು: ಮಹಿಳೆಯ ಮೇಲೆ ಪಾನ್‌ ಮಸಾಲ ಉಗಿದಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 20:43 IST
Last Updated 13 ಮಾರ್ಚ್ 2025, 20:43 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯ ಮೇಲೆ ಪಾನ್‌ ಮಸಾಲ ಉಗಿದು ಪರಾರಿ ಆಗಿದ್ದ ಆರೋಪಿ ತಿಪ್ಪಸಂದ್ರದ ನಿವಾಸಿ ಹರೀಶ್‌ನನ್ನು ಇಂದಿರಾ ನಗರದ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ದೊಮ್ಮಲೂರಿನ ನಿವಾಸಿ ಅರ್ಚನಾ ಅವರು ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ಆರೋಪಿ, ಪಾನ್‌ ಮಸಾಲ ಉಗಿದು ತೆರಳಿದ್ದ. ಫೆ.25ರಂದು ಘಟನೆ ನಡೆದಿತ್ತು. ಅರ್ಚನಾ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಅನಿಲ ಸೋರಿಕೆ: ಇಬ್ಬರಿಗೆ ಗಾಯ

ಬೆಂಗಳೂರು: ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಯ್ಯರೆಡ್ಡಿ ಪಾಳ್ಯದ ಮನೆಯೊಂದರಲ್ಲಿ ಗುರುವಾರ ಮುಂಜಾನೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಬ್ಬಯ್ಯರೆಡ್ಡಿ ಪಾಳ್ಯದ ನಿವಾಸಿಗಳಾದ ಹನುಮಂತಪ್ಪ (70) ಹಾಗೂ ಮಂಜುನಾಥ್‌(34) ಗಾಯಗೊಂಡವರು. ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮನೆಯಲ್ಲಿ ಐದು ಮಂದಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಎಲ್ಲರೂ ಮನೆಯಲ್ಲೇ ಊಟ ಮಾಡಿ ಮಲಗಿದ್ದರು. ಗುರುವಾರ ಬೆಳಿಗ್ಗೆ ಕೆಲಸಕ್ಕೆ ತೆರಳಲು ಮಂಜುನಾಥ್‌ ಅವರು ಬೇಗ ಎದ್ದಿದ್ದರು. ಅಡುಗೆ ಸಿಲಿಂಡರ್‌ನಿಂದ ಅನಿಲ ಸೋರಿಕೆ ಆಗಿದ್ದು, ಅವರ ಗಮನಕ್ಕೆ ಬಂದಿರಲಿಲ್ಲ. ಸ್ಟೌ ಆನ್‌ ಮಾಡಲು ಹೋದಾಗ ಬೆಂಕಿ ಹೊತ್ತಿಕೊಂಡಿದೆ. ಆಗ ಇಬ್ಬರು ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣ ಹಾಗೂ ಬಟ್ಟೆಗಳು ಭಸ್ಮವಾಗಿವೆ ಎಂದು ಪೊಲೀಸರು ಹೇಳಿದರು.

ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.