ADVERTISEMENT

ಮುಂದಿನ ಶತಮಾನ ಭಾರತದ್ದು: ರವಿ ಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:08 IST
Last Updated 26 ನವೆಂಬರ್ 2022, 19:08 IST
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕ ರವಿ ಸುಬ್ರಹ್ಮಣ್ಯ ಪುರಸ್ಕರಿಸಿದರು. ಆದರ್ಶ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಪದಮ್‌ ರಾಜ್‌ ಮೆಹ್ತಾ, ಗೌರವ ಕಾರ್ಯದರ್ಶಿ ಜಿತೇಂದ್ರ ಮರಾಡಿಯಾ, ಎಸ್‌ಆರ್‌ಎನ್‌ ಆದರ್ಶ ಕಾಲೇಜಿನ ಪ್ರಾಂಶುಪಾಲ ಶಕುಂತಲಾ ಸ್ಯಾಮ್ಯುಲ್ಸನ್‌, ಎಸ್‌ಆರ್‌ಎನ್‌ ಆದರ್ಶ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್‌.ಪ್ರಶಾಂತ್‌ ಇದ್ದರು.

ಬೆಂಗಳೂರು: ‘ಮುಂದಿನ ಶತಮಾನ ಭಾರತ ದೇಶದ್ದು, ವಿಶ್ವವೇ ಇದನ್ನು ಎದುರು ನೋಡುತ್ತಿದೆ. ಇದನ್ನು ಸಾಕಾರಗೊಳಿಸುವ ಶಕ್ತಿ ನಮ್ಮ ದೇಶದ ವಿದ್ಯಾರ್ಥಿ ಸಮೂಹಕ್ಕಿದೆ’ ಎಂದು ಶಾಸಕ ರವಿಸುಬ್ರಮಣ್ಯ ಹೇಳಿದರು.

ಆದರ್ಶ ಸಮೂಹ ಸಂಸ್ಥೆಗಳ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಭಾರತವು ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಪರಿಶ್ರಮ ಇಲ್ಲದೇ ಯಾವುದೇ ಸಾಧನೆ ಇರುವುದಿಲ್ಲ. ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ಅಪ್‌ ರೀತಿಯ ಯೋಜನೆಗಳಲ್ಲಿ ಬೆಂಗಳೂರು ನಗರವು ದೇಶದಲ್ಲೇ ಮುಂದಿದೆ. ಇದರ ಸದುಪಯೋಗವನ್ನು ಯುವ ಸಮೂಹ ಪಡೆದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT