
ಪ್ರಜಾವಾಣಿ ವಾರ್ತೆ
ಅದಿತಿ
ಬೆಂಗಳೂರು: ಮಲ್ಲೇಶ್ವರಂನ ಸೇವಾ ಸದನ ಆಡಿಟೋರಿಯಂನಲ್ಲಿ ಸೋಮವಾರ( ಡಿ.8) ಸಂಜೆ 5.30ಕ್ಕೆ ಜಿ.ಸಿ.ಅದಿತಿ ಅವರ ರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.
ಹಿಮ್ಮೇಳದಲ್ಲಿ ಹಾಡುಗಾರಿಕೆ ಡಿ.ಎಸ್. ಶ್ರೀವತ್ಸ, ಮೃದಂಗ ಜಿ.ಎಸ್.ನಾಗರಾಜ್, ವೀಣೆ ಗೋಪಾಲ್ ಹಾಗೂ ಕೊಳಲು ವೆಂಕಟರಮಣ, ಶುಭಾ ಬಾಲಸುಬ್ರಹ್ಮಣ್ಯ ನಟವಾಂಗದಲ್ಲಿ ಸಹಕರಿಸಲಿದ್ದಾರೆ.
ಚಿಂತಕಿ ಡಾ.ವಿ.ಬಿ.ಆರತಿ ಹಾಗೂ ಭರತನಾಟ್ಯ ಕಲಾವಿದ ಪಿ.ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.