ಮೊದಲ ಬಾರಿಗೆ ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಆಂಧ್ರಪ್ರದೇಶದಿಂದ ಬಂದಿದ್ದೇನೆ. ಈ ಪ್ರದರ್ಶನ ನನಗೆ ಅದ್ಭುತ ಅನುಭವ ನೀಡಿದೆ. ಸೂರ್ಯ ಕಿರಣ ತಂಡದ ಪ್ರದರ್ಶನ ರೋಮಾಂಚನಕಾರಿಯಾಗಿತ್ತು.
ಕೆ. ಲಿಖಿತಾ, ಆಂಧ್ರಪ್ರದೇಶ
–0–
ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ಹಿಂದೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುತ್ತಿತ್ತು. ಈಗ ಐದಾರು ಯುದ್ಧ ವಿಮಾನಗಳು ಮಾತ್ರ ಹಾರಾಟ ನಡೆಸಿ ಮನೋರಂಜಿಸಿದವು. ಸದ್ಯ ಯುದ್ಧ ವಿಮಾನಗಳು ಮತ್ತು ಅವುಗಳ ಪರಿಕರಗಳ ವೀಕ್ಷಣೆ, ಪ್ರದರ್ಶನ ಹಾಗೂ ಮಾರಾಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಪ್ರದರ್ಶನವನ್ನು ಬಹಳ ಅದ್ಭುತವಾಗಿ ಆಯೋಜಿಸಲಾಗಿದೆ.
ಆರ್. ಲಿಖಿತಾ, ಬಾಗಲೂರು
–0–
ಮೊದಲ ಬಾರಿ ಏರೊ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದೇನೆ. 20 ವರ್ಷಗಳಿಂದ ಇಲ್ಲಿಗೆ ಭೇಟಿ ನೀಬೇಕು ಎಂದುಕೊಂಡಿದ್ದ ಆಸೆ ಈಗ ಈಡೇರಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಇಂತಹ ಪ್ರದರ್ಶನಕ್ಕೆ ಭೇಟಿನೀಡಿ, ದೇಶದ ವಾಯುಪಡೆಯ ಸಾಮರ್ಥ್ಯವನ್ನು ಕಣ್ತುಂಬಿಕೊಳ್ಳಬೇಕು. ವಾಯು ನೆಲೆಗೆ ಪ್ರವೇಶಿಸಲು ಸಂಚಾರದಟ್ಟಣೆಯ ಸಮಸ್ಯೆಗೆ ಮುಕ್ತಿ ನೀಡಬೇಕು.
ಚೇತನಾ, ಹೊಸಕೋಟೆ
–0–
ಏರೊ ಇಂಡಿಯಾ ಪ್ರದರ್ಶನಕ್ಕೆ ಪ್ರಥಮ ಬಾರಿ ಭೇಟಿ ನೀಡುತ್ತಿದ್ದು, ಸೂರ್ಯ ಕಿರಣ ತಂಡ ಪ್ರಸ್ತುತಪಡಿಸಿದ ಹೃದಯಾಕಾರದ ಚಿತ್ರಣ ಅದ್ಭುತವಾಗಿತ್ತು. ಅಮೆರಿಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನದಲ್ಲಿ ಆಧುನಿಕ ವಿಮಾನಗಳನ್ನು ಪ್ರದರ್ಶಿಸುವುದಿಲ್ಲ. ಪ್ರಥಮ ಮತ್ತು ದ್ವೀತಿಯ ವಿಶ್ವ ಯುದ್ಧಗಳಲ್ಲಿ ಬಳಸಿದ ವಿಮಾನಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗುತ್ತದೆ. ಇಲ್ಲಿ ಪ್ರಸ್ತುತ ಆಧುನಿಕ ಯುದ್ಧ ವಿಮಾನಗಳನ್ನೂ ನೋಡುತ್ತಿರುವುದು ಬಹಳ ಖುಷಿ ನೀಡಿದೆ.
ದೀಪಕ್, ನಾಗಸಂದ್ರ
–0–
ತೇಜಸ್, ಸುಖೋಯ್, ಸೂರ್ಯ ಕಿರಣ ಯುದ್ಧ ವಿಮಾನಗಳ ಪ್ರದರ್ಶನ ಬಹಳ ಚೆನ್ನಾಗಿತ್ತು. ನಾನು ಇಲ್ಲಿಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದು, ವೈಮಾನಿಕ ಪ್ರದರ್ಶನವನ್ನು ಶಿಸ್ತುಬದ್ಧವಾಗಿ ಆಯೋಜಿಸಲಾಗಿದೆ. ಆದರೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ನಾವು ನಾಗಸಂದ್ರದಿಂದ ಯಲಹಂಕಕ್ಕೆ 20 ನಿಮಿಷಗಳಲ್ಲಿ ಬಂದರೆ, ಯಲಹಂಕದಿಂದ ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಬರಲು 45 ನಿಮಿಷಗಳು ಬೇಕಾಯಿತು.
ಉಜ್ವಲ್, ದಾಸರಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.