ADVERTISEMENT

‘ಗೈಡ್‌ವೈರ್ ಟೆಕ್ನಾಲಜಿ ಲ್ಯಾಬ್ಸ್’ಗಾಗಿ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 23:40 IST
Last Updated 16 ಮೇ 2025, 23:40 IST
ನಗರದ ಪಿಇಎಸ್ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಚೆನ್ನೈಯ ಎಸ್‌ಆರ್‌ಎಂ ವಿಶ್ವವಿದ್ಯಾಲಯ, ಚೆನ್ನೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠಂ ಪಾಲುದಾರಿಕೆಯಲ್ಲಿ ‘ಗೈಡ್‌ವೈರ್ ಟೆಕ್ನಾಲಜಿ ಲ್ಯಾಬ್ಸ್’ ಪ್ರಾರಂಭಿಸಲು ಗೈಡ್‌ವೈರ್ ಇಂಡಿಯಾ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು
ನಗರದ ಪಿಇಎಸ್ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಚೆನ್ನೈಯ ಎಸ್‌ಆರ್‌ಎಂ ವಿಶ್ವವಿದ್ಯಾಲಯ, ಚೆನ್ನೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠಂ ಪಾಲುದಾರಿಕೆಯಲ್ಲಿ ‘ಗೈಡ್‌ವೈರ್ ಟೆಕ್ನಾಲಜಿ ಲ್ಯಾಬ್ಸ್’ ಪ್ರಾರಂಭಿಸಲು ಗೈಡ್‌ವೈರ್ ಇಂಡಿಯಾ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು   

ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯ, ಚೆನ್ನೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠಂ ಜೊತೆ ಪಾಲುದಾರಿಕೆಯಲ್ಲಿ ‘ಗೈಡ್‌ವೈರ್ ಟೆಕ್ನಾಲಜಿ ಲ್ಯಾಬ್ಸ್’ ಆರಂಭಿಸುವುದಾಗಿ ಗೈಡ್‌ವೈರ್ ಇಂಡಿಯಾ ಘೋಷಿಸಿದೆ.

ಪಿಇಎಸ್ ವಿಶ್ವವಿದ್ಯಾಲಯದ ಕುಲಸಚಿವ ಕೆ.ಎಸ್. ಶ್ರೀಧರ್, ರೇವಾ ವಿಶ್ವವಿದ್ಯಾಲಯದ ಕುಲಪತಿ ಸಂಜಯ್ ಚಿಟ್ನಿಸ್, ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವೃತ್ತಿ ಕೇಂದ್ರದ ನಿರ್ದೇಶಕ ವೆಂಕಟ ಶಾಸ್ತ್ರಿ, ಚೆನ್ನೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಾವೀನ್ಯ ಮತ್ತು ಟ್ರಸ್ಟಿ ನಿರ್ದೇಶಕ ಗೋಕುಲಕೃಷ್ಣನ್ ಶ್ರೀರಾಮ್ ಮತ್ತು ಅಮೃತ ವಿಶ್ವ ವಿದ್ಯಾಪೀಠದ ಅಕಾಡೆಮಿಯಾ ಇಂಡಸ್ಟ್ರಿ ಪಾಲುದಾರಿಕೆ ನಿರ್ದೇಶಕ ಸುರೇಶ್ ಕೊಡೂರ್ ಅವರು ಪಾಲುದಾರಿಕೆಗೆ ಸಹಿ ಹಾಕಿದರು.

ಈ ವಿಶ್ವವಿದ್ಯಾನಿಲಯಗಳಲ್ಲಿ ಜಾರಿಗೆ ತರಲಿರುವ ಗೈಡ್‌ವೈರ್ ಇಂಟೆಲಿಜೆಂಟ್ ಟೆಕ್ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಗೈಡ್‌ವೈರ್‌ನ ಪ್ರಮುಖ ಪರಿಹಾರಗಳು ಮತ್ತು ‘ಕುಬರ್ನೆಟ್ಸ್’, ‘ಡಾಕರ್’ ಮತ್ತು ‘ಗೋ’ ನಂತಹ ತಂತ್ರಜ್ಞಾನಗಳಲ್ಲಿ ಉದ್ಯಮ-ಸಂಬಂಧಿತ ಕೌಶಲಗಳಿಗೆ ಮಾನ್ಯತೆಯನ್ನು ನೀಡಲಿದೆ.

ADVERTISEMENT

‘ಗೈಡ್‌ವೈರ್ ಟೆಕ್ನಾಲಜಿ ಲ್ಯಾಬ್‌ಗಳ ಪ್ರಾರಂಭವು ನಮ್ಮ ವಿಶಾಲ ವಿಸ್ತರಣಾ ತಂತ್ರದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ನಮ್ಮ ಪಾಲುದಾರ ಕಂಪನಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ವಿವಿಧ ವಿಶ್ವವಿದ್ಯಾಲಯ ಗಳಿಗೆ ವಿಸ್ತರಿಸುವುದು, ಆ ಮೂಲಕ ಮುಂದಿನ ಪೀಳಿಗೆಯ ತಜ್ಞರನ್ನು ಬೆಳೆಸುವುದು ನಮ್ಮ ಗುರಿ’ ಎಂದು ಗೈಡ್‌ವೈರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಆಂಜಿ ಎಸ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.