ADVERTISEMENT

ವಿಜೇತ ನವೋದ್ಯಮಕ್ಕೆ ₹25 ಲಕ್ಷ ಅನುದಾನ

ಕೃಷಿ ಕ್ಷೇತ್ರದ ಸವಾಲುಗಳಿಗೆ ಪರಿಹಾರ ಸೂಚಿಸಲು ರಾಷ್ಟ್ರಮಟ್ಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 19:26 IST
Last Updated 23 ಜುಲೈ 2021, 19:26 IST
ಸ್ಪರ್ಧೆ ಕುರಿತ ಭಿತ್ತಿ ಪತ್ರಗಳನ್ನು ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಗಣ್ಯರು ಬಿಡುಗಡೆಗೊಳಿಸಿದರು. ಎನ್‌ಸಿಬಿಎಸ್‌ ನಿರ್ದೇಶಕ ಪ್ರೊ.ಸತ್ಯಜಿತ್ ಮೇಯರ್, ಇನ್‌ಸ್ಟೆಮ್‌ ನಿರ್ದೇಶಕ ಪ್ರೊ.ಅಪೂರ್ವ ಸರಿನ್, ಸಿ-ಕ್ಯಾಂಪ್‌ ಸಿಇಒ ಮತ್ತು ನಿರ್ದೇಶಕ ತಸ್ಲೀಂ ಆರೀಫ್‌ ಸಯ್ಯದ್‌, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಿರ್ದೇಶಕರಾದ ಮೀನಾ ನಾಗರಾಜ್ ಇದ್ದರು

ಬೆಂಗಳೂರು: ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ವಿನೂತನ ಪರಿಹಾರಗಳನ್ನು ಕಂಡುಹಿಡಿಯುವ ನವೋದ್ಯಮಗಳನ್ನು ಉತ್ತೇಜಿಸಲು ಸಿ–ಕ್ಯಾಂಪ್‌ ಸಂಸ್ಥೆಯು ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ವಿಜೇತವಾದ ನವೋದ್ಯಮಕ್ಕೆ ₹25 ಲಕ್ಷದವರೆಗೆ ಅನುದಾನ ಒದಗಿಸಲಾಗುತ್ತದೆ.

ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧೆಯ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ‘ನವೋದ್ಯಮಿಗಳನ್ನು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ಮೂಲಕ ಕೃಷಿ ವಲಯದಲ್ಲಿ ಆರ್ಥಿಕವಾಗಿ ಕಾರ್ಯಸಾಧುವಾದ, ಪರಿಹಾರ ಕೇಂದ್ರಿತ, ಅತ್ಯಾಧುನಿಕ ವಿಜ್ಞಾನ–ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲಾಗುತ್ತದೆ’ ಎಂದರು.

ಇದೇ ಸಂದರ್ಭದಲ್ಲಿ, ಭಾರತ–ಇಸ್ರೇಲ್‌ ನಡುವೆ ಒಪ್ಪಂದ ಏರ್ಪಟ್ಟಿತು. ಉಭಯ ದೇಶಗಳ ಜೀವವಿಜ್ಞಾನ ಮತ್ತು ಕೃಷಿ ತಾಂತ್ರಿಕತೆ ಕ್ಷೇತ್ರದ ನವೋದ್ಯಮಗಳ ನಡುವೆ ಸಹಭಾಗಿತ್ವ ಹೆಚ್ಚಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.

ADVERTISEMENT

ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲ್ ಜನರಲ್ ಡಾ.ಜೊನಾಥನ್ ಜಡ್ಕಾ, ‘ಈ ಒಪ್ಪಂದದಿಂದಾಗಿ ಎರಡೂ ದೇಶಗಳ ನವೋದ್ಯಮಗಳ ನಡುವೆ ಸಹಕಾರ ಹೆಚ್ಚಾಗಲಿದೆ. ಉಭಯ ದೇಶಗಳ ಪರಿಣತ ವಲಯಗಳನ್ನು ಒಂದೇ ವೇದಿಕೆಯಡಿ ತಂದು ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಭಾಗಿತ್ವದ ಅಭಿವೃದ್ಧಿಗೆ ಪೂರಕವಾದ ವಾತಾವರಣ ರೂಪಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.