ಅಂಶಿ ಪ್ರಸನ್ನಕುಮಾರ್
ಬೆಂಗಳೂರು: ಕೃಷಿ ಪತ್ರಿಕೋದ್ಯಮ ಉತ್ತೇಜಿಸಲು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ನೀಡುವ 2025ರ ‘ಹೊಂಬಾಳೆ ಸಂಹಿತ ಹರಿಣಿಕುಮಾರ್ ಅಲುಮ್ನಿ ಕೃಷಿ ಮಾಧ್ಯಮ’ ಪ್ರಶಸ್ತಿಗೆ ‘ಕನ್ನಡ ಪ್ರಭ‘ ಪತ್ರಿಕೆಯ ಪತ್ರಕರ್ತ ಮೈಸೂರಿನ ಅಂಶಿ ಪ್ರಸನ್ನಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಸ್ಮರಣಿಕೆ, ₹10 ಸಾವಿರ ನಗದು ಒಳಗೊಂಡಿದೆ. ಬೆಂಗಳೂರು ಕೃಷಿ ವಿವಿ ಹಳೆಯ ವಿದ್ಯಾರ್ಥಿಗಳ ಸಂಘವು ಹೆಬ್ಬಾಳದ ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನಲ್ಲಿ ಅ.11ರಂದು ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯಕಾರಿ ಸಮಿತಿ ಸದಸ್ಯ ಕೆ. ಶಿವರಾಮು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.