ADVERTISEMENT

ಎಐ: ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 23:06 IST
Last Updated 10 ಸೆಪ್ಟೆಂಬರ್ 2025, 23:06 IST
<div class="paragraphs"><p>ಎಐ ಚಿತ್ರ&nbsp;</p></div>

ಎಐ ಚಿತ್ರ 

   

ಬೆಂಗಳೂರು: ಬಹುಶಿಸ್ತೀಯ ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಸೆಪ್ಟೆಂಬರ್‌ 11 ಮತ್ತು 12ರಂದು ವಿಜಯ ಕಾಲೇಜಿನಲ್ಲಿ ನಡೆಯಲಿದೆ.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಎಸ್. ರಂಗಪ್ಪ, ಪ್ರಾಧ್ಯಾಪಕ ಜಿ. ವಿಶ್ವನಾಥಪ್ಪ, ಬಿಎಚ್‌ಎಸ್‌ಎಚ್‌ಇಎಸ್‌ನ ಕಾರ್ಯದರ್ಶಿ ಟಿ.ಎ. ಬಾಲಕೃಷ್ಣ, ಜಂಟಿ ಕಾರ್ಯದರ್ಶಿ ಟಿ.ಎಸ್. ಶ್ರೀಧರ್, ಕೆಎಂಎಫ್‌ ನಿರ್ದೇಶಕ ಜೆ. ಜೈಕುಮಾರ್, ವಿಜಯ ಕಾಲೇಜಿನ ಪ್ರಾಂಶುಪಾಲ ಎಂ. ಸುಬ್ರಮಣ್ಯ ಭಟ್, ಉಪ ಪ್ರಾಂಶುಪಾಲೆ ಜೈಬಾ ನಿಶಾತ್ ಬಾನು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.