ADVERTISEMENT

ಬೆಂಗಳೂರಲ್ಲಿ ನಾಯಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಏರ್‌ಕ್ರಾಫ್ಟ್! ಪೈಲಟ್‌ಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 18:29 IST
Last Updated 17 ಏಪ್ರಿಲ್ 2022, 18:29 IST
ಏರ್‌ಕ್ರಾಫ್ಟ್
ಏರ್‌ಕ್ರಾಫ್ಟ್   

ಬೆಂಗಳೂರು: ನಗರದ ಜಕ್ಕೂರು ಬಳಿಯ ವೈಮಾನಿಕ ತರಬೇತಿ ಕೇಂದ್ರದಲ್ಲಿ ಏರ್‌ಕ್ರಾಫ್ಟ್ ಉರುಳಿಬಿದ್ದಿದ್ದು, ಮಹಿಳಾ ಪೈಲಟ್ ಗಾಯಗೊಂಡಿದ್ದಾರೆ.

ತರಬೇತಿ ಪಡೆಯುತ್ತಿರುವ ಮಹಿಳಾ ಪೈಲಟ್ ಭಾನುವಾರ ರನ್‌ವೇಯಲ್ಲಿ ಏರ್‌ಕ್ರಾಫ್ಟ್ ಚಲಾಯಿಸಿದ್ದರು.
ಆಕಾಶಕ್ಕೆ ಹಾರಲು ಕೆಲ‌ ಕ್ಷಣಗಳು ಬಾಕಿ ಇರುವಾಗಲೇ ನಾಯಿಯೊಂದು ಅಡ್ಡ ಬಂದಿತ್ತು. ನಾಯಿಗೆ ಡಿಕ್ಕಿ ಹೊಡೆದ ಏರ್‌ಕ್ರಾಫ್ಟ್ ರನ್‌ವೇಯಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿತು.

ರಕ್ಷಣೆಗೆ ಬಂದ ಸಹೋದ್ಯೋಗಿಗಳು, ಮಹಿಲಾ ಪೈಲಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಏರೋಡ್ರಮ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.