ಬೆಂಗಳೂರು: ಅಖಿಲ ಹವ್ಯಕ ಮಹಾಸಭಾವು 2024–25ನೇ ಸಾಲಿನ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗಳನ್ನು ಶನಿವಾರ ಪ್ರಕಟಿಸಿದ್ದು, ‘ಹವ್ಯಕ ವಿಭೂಷಣ’ ಪ್ರಶಸ್ತಿಗೆ ಉದ್ಯಮಿಯೂ ಆಗಿರುವ ಸಮಾಜ ಸೇವಕ ಜಿ.ವಿ. ಭಟ್ ಗೋರೆ ಆಯ್ಕೆಯಾಗಿದ್ದಾರೆ.
‘ಹವ್ಯಕ ಭೂಷಣ’ ಪ್ರಶಸ್ತಿಗೆ ಭಾಷಾ ತಜ್ಞ ಪಾದೇಕಲ್ಲು ವಿಷ್ಣು ಭಟ್ಟ, ಶಿಕ್ಷಣ ತಜ್ಞ ಎಸ್.ಎನ್. ಹೆಗಡೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪರಮೇಶ್ವರ ಹೆಗಡೆ ಆಯ್ಕೆಯಾಗಿದ್ದಾರೆ. ‘ಹವ್ಯಕ ಶ್ರೀ’ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಸಂಜಯ ಬೆಳೆಯೂರು, ನೃತ್ಯ ಕಲಾವಿದೆ ಕಾವ್ಯ ಜಿ. ರಾವ್, ಸಂಗೀತ ಕಲಾವಿದ ಕೆ.ಜೆ. ದಿಲೀಪ್ ಭಾಜನರಾಗಿದ್ದಾರೆ.
‘ಹವ್ಯಕ ಸೇವಾಶ್ರೀ’ ಪ್ರಶಸ್ತಿಗೆ ‘ಹವ್ಯಕ ಮಾಸ ಪತ್ರಿಕೆ’ ಸಂಚಾಲಕ ನಾರಾಯಣ ಭಟ್ ಹುಳೇಗಾರು ಆಯ್ಕೆಯಾಗಿದ್ದಾರೆ. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಇದೇ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 82ನೇ ಹವ್ಯಕ ಸಂಸ್ಥಾಪನೋತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.