ಯಲಹಂಕ: ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಖಿಲಭಾರತ ರಸಪ್ರಶ್ನೆ ಸ್ಪರ್ಧೆಯಲ್ಲಿ(ಎರಡನೇ ಆವೃತ್ತಿ) ಜೈಪುರದ ಕೇಂಬ್ರಿಡ್ಜ್ ಕೋರ್ಟ್ ಪ್ರೌಢಶಾಲೆ ಚಾಂಪಿಯನ್ ಆಗಿದೆ.
ಅಲ್ಲಿನ ವಿದ್ಯಾ ರ್ಥಿಗಳಾದ ಧಾರಿಯಾ ಮತ್ತು ವೈಭವ್ ರೈ ₹ 1.50 ಲಕ್ಷ ಮೊತ್ತದ ಚೆಕ್ ಮತ್ತು ಪ್ರಶಸ್ತಿಪತ್ರ ಪಡೆದರು. ಎರಡನೇ ಸ್ಥಾನ ಪಡೆದ ಕೊಚ್ಚಿಯ ಅಸ್ಸಿಸಿ ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ ಜಿಯಾನ್ ಜೊಮಿ ಮತ್ತು ಅಖಿಲ್ ಕೃಷ್ಣನ್ ಯು.ಆರ್. ₹ 1 ಲಕ್ಷ, ಮೂರನೇ ಸ್ಥಾನ ಪಡೆದ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ಪರ್ವ ಜೈನ್ ಮತ್ತು ಅರ್ಘ ಜೈನ್ ₹ 50 ಸಾವಿರ ಬಹುಮಾನ ಪಡೆದರು.
ಮಣಿಪಾಲ್ ಉನ್ನತಶಿಕ್ಷಣ ಸಂಸ್ಥೆಯ ಕುಲಪತಿ ಮಧು ವೀರರಾಘವನ್ ಮಾತನಾಡಿ, ‘ಇಂತಹ ಸ್ಪರ್ಧೆಗಳು ಜ್ಞಾನವನ್ನು ಪರೀಕ್ಷಿಸುವುದಲ್ಲದೆ ಸಹನಶೀಲ, ಸಮಸ್ಯೆ ಪರಿಹಾರ ಮತ್ತು ಸ್ನೇಹ ಮನೋಭಾವಯನ್ನು ಉತ್ತೇಜಿಸುತ್ತದೆ’ ಎಂದು ತಿಳಿಸಿದರು.
ಸಂಸ್ಥೆಯ ಉಪ ಕುಲಸಚಿವರಾದ ರಾಘವೇಂದ್ರ ಪ್ರಭು, ಸ್ವೀಕೃತಿ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯ ಅಧಿಕಾರಿ ಆದಿತ್ಯ ಮೋಹನ್ ಜಾಧವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.